ಕಲಬುರಗಿ: ಭಯೋತ್ಪಾದನೆಯನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಕೇಂದ್ರ ಮಾಜಿ ಸಚಿವ ಗುಲಾಮ ನಬಿ ಆಜಾದ್ ಹೇಳಿದರು. ಇಲ್ಲಿನ ಸುಪರ್ ಮಾರ್ಕೆಟ್ ಪ್ರದೇಶದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ ಖರ್ಗೆ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

“ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಮಾನವೀಯತೆಯ ಮೇಲೆ ನಡೆಯುವ ಯಾವುದೇ ಹಲ್ಲೆ, ಮಾರಣ ಹೋಮವನ್ನು ಖಂಡಿಸಲೇಬೇಕು’ ಎಂದರು. ಶ್ರೀಲಂಕಾದಲ್ಲಿ ನಡೆದ ಸ್ಫೋಟದಲ್ಲಿ ನೂರಾರು ಜನರು ಹತರಾಗಿರುವುದನ್ನು ಪ್ರಸ್ತಾಪಿಸಿದ ಅವರು ‘ಇದೊಂದು ಮುಗ್ಧರ ಮೇಲಿನ ಹಲ್ಲೆ, ಭಯೋತ್ಪಾದಕರು ಯಾರೇ ಆಗಿರಲಿ, ಅವರಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದರು.

Leave a Reply