ಇತ್ತೀಚೆಗೆ ಹೈದರಾಬಾದ್ ನಲ್ಲಿ ವ್ಯಕ್ತಿಯೊಬ್ಬನ ಪ್ಯಾಕೆಟ್ ನಲ್ಲಿ ಇರಿಸಲಾಗಿದ್ದ ಹೊಸ ಮೊಬೈಲ್ ಸ್ಪೋಟಗೊಂಡಿರುವುದಾಗಿ ವರದಿಯಾಗಿತ್ತು. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಮಯದಲ್ಲಿ ಕಿಸೆಯಲ್ಲಿದ್ದ ಒಪೋ ಎ 5 ಫೋನ್ ಸ್ಫೋಟಗೊಂಡಿತ್ತು ಮತ್ತು ಇದರಿಂದ ವ್ಯಕ್ತಿಯ ಪಾದಗಳು ಸುಟ್ಟುಹೋಗಿತ್ತು. ಇದೀಗ ಬೆಂಗಳೂರು ಹೊರವಲಯದಲ್ಲಿ ನಂದಗುಡಿ ಸಮೀಪದಲ್ಲಿ ಇಂತಹದ್ದೇ ಘಟನೆ ವರದಿಯಾಗಿದೆ.

ಕೆ.ಆರ್. ಗಂಗಾಧರ್ (25), ಏ. 18 ರಂದು ಮತ ಚಲಾಯಿಸಲು ದ್ವಿಚಕ್ರ ವಾಹನದಲ್ಲಿ ಹೊಸಕೋಟೆ-ಚಿಂತಾಮಣಿ ರಸ್ತೆಯ ತರಬಹಳ್ಳಿ ಗೇಟ್ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಪ್ಯಾಂಟಿನ ಎಡಜೇಬಿನಲ್ಲಿ ಇಟ್ಟಿದ್ದ ಫೋನ್ ನಲ್ಲಿ ಹೋಗೆ ಬರುವುದು ಕಂಡು ಬಂದಿದ್ದು ಕೂಡಲೇ ಅದು ಬ್ಲಾಸ್ಟ್ ಆಯಿತು. ಅವರು ಈ ತಿಂಗಳ 17 ರಂದು ಅದನ್ನು ಖರೀದಿಸಿದ್ದರು. ಅವರ ಕಾಲಿಗೆ ಗಾಯ, ತಾಯಿಗೆ ಗಂಭೀರ ಗಾಯ ವಾಗಿದೆ. ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರು ಮೊಬೈಲ್ ಅಂಗಡಿ ಮ್ಯಾನೇಜರ್ ಹಾಗೂ ಮೊಬೈಲ್ ಕಂಪನಿ ವಿರುದ್ಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Leave a Reply