ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿ ಎರಡನೇ ಅವಧಿಗೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. ರಾಷ್ಟ್ರೀಯತೆ, ಹಿಂದೂವಾದ ಮತ್ತು ನವ ಭಾರತ ನಿರ್ಮಾಣದಂತಹ ಹಲವು ಸಿದ್ದಾಂತಗಳ ಮೂಲಕ ಗೆದ್ದು ಜನಾದೇಶವನ್ನು ಬಿಜೆಪಿ ತಮ್ಮದಾಗಿಸಿಕೊಂಡಿದೆ.

ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಿಂದ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ 9 ನಾಯಕರು ಮೋದಿ ಸುನಾಮಿ ಅಲೆಯಲ್ಲಿ ಸೋಲು ಕಂಡಿದ್ದಾರೆ.ಮಾಜಿ ಮುಖ್ಯಮಂತ್ರಿಗಳಾದ ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್, ದೆಹಲಿಯ ಶೀಲಾ ದೀಕ್ಷಿತ್, ಹರ್ಯಾಣದ ಣದ ಭೂಪೀಂದರ ಹೂಡಾ, ಉತ್ತರಾಖಂಡ್ ನ ಹರೀಶ್ ರಾವತ್, ಮೇಘಾಲಯದ ನಬಾಮ್ ಟುಕಿ, ಕರ್ನಾಟಕದ ವೀರಪ್ಪ ಮೊಯ್ಲಿ ಸೇರಿದಂತೆ ಒಟ್ಟು 9 ನಾಯಕರು ಬಿಜೆಪಿ ಎದುರು ಪರಾಭವಗೊಂಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದಲ್ಲಿ ಬಿಜೆಪಿ ಸಾದ್ವಿ ವಿರುದ್ದ 3,63,933 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಿಎಂ ದಿಗ್ವಿಜಯಸಿಂಗ್ ಪರಾಭವಗೊಂಡಿದ್ದಾರೆ. ಸೋನಿಪತ್ ಕ್ಷೇತ್ರದಲ್ಲಿ ಮಾಜಿ ಸಿಎಂ ಭೂಪೀಂದರ ಹೊಡಾ, ನೈನಿತಾಲ್ ಕ್ಷೇತ್ರದಲ್ಲಿ ಉತ್ತರಾಖಂಡ ಮಾಜಿ ಸಿಎಂ ಹರೀಶ್ ರಾವತ್, ಮಹಾರಾಷ್ಟ ಮಾಜಿ ಸಿಎಂ ಅಶೋಕ್ ಚೌಹಾಣ ಸಹ ಸೋಲುಂಡಿದ್ದಾರೆ. ಕೇಂದ್ರ ಕಾನೂನು ಸಚಿವರಾಗಿದ್ದು ಕರ್ನಾಟಕದ ಮುಖ್ಯಮಂತ್ರಿಯೂ ಆಗಿದ್ದ ವೀರಪ್ಪಮೊಯ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಜಯ ಅನುಭವಿಸಿದ್ದಾರೆ.

ಪ್ರಭಾವಗೊಂಡ ಒಂಭತ್ತು ಮಾಜಿ ಮುಖ್ಯ ಮಂತ್ರಿಗಳು

1. ಶೀಲಾ ದೀಕ್ಷಿತ್: ಹಿರಿಯ ನಾಯಕಿ ಮತ್ತು ಮೂರು ಬಾರಿ ದೆಹಲಿ ಮುಖ್ಯಮಂತ್ರಿ .

2. ಭೂಪಿಂದರ್ ಸಿಂಗ್ ಹೂಡಾ: 2005 ರಿಂದ 2014 ರವರೆಗೂ ಹರ್ಯಾಣ ರಾಜ್ಯದ ಮುಖ್ಯಮಂತ್ರಿ.

3. ಹರೀಶ್ ರಾವತ್: ಉತ್ತರಾಖಂಡದ ಮುಖ್ಯಮಂತ್ರಿ.

4. ದಿಗ್ವಿಜಯ್ ಸಿಂಗ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ.

5. ವೀರಪ್ಪ ಮೊಯಿಲಿ: ಮಾಜಿ ಕೇಂದ್ರ ಪೆಟ್ರೋಲಿಯಂ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ.

6. ಸುಶೀಲ್ಕುಮಾರ್ ಶಿಂಧೆ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ.

7. ಅಶೋಕ್ ಚವಾಣ್: ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಶಂಕರರಾವ್ ಚವಾಣ್ ಅವರ ಪುತ್ರ.

8. ನಬಾಮ್ ತುಕಿ: ಎರಡು ಬಾರಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ.

9. ಮುಕುಲ್ ಸಂಗ್ಮಾ: ಮಾಜಿ ಮೇಘಾಲಯ ಮುಖ್ಯಮಂತ್ರಿ.

 

Leave a Reply