2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ (303 ಸ್ಥಾನಗಳನ್ನು) ಗೆದ್ದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಫಲಿತಾಂಶ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಬಾರಿ 2014 ಕ್ಕೆ ಹೋಲಿಸಿದರೆ, ಬಿಜೆಪಿ ಅದ್ಭುತ ಪ್ರದರ್ಶನದ ತೋರಿದ್ದು, ಈ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಟ್ವಿಟರ್ನಲ್ಲಿ ಕವಿತೆಯನ್ನು ಪೋಸ್ಟ್ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ. ಕವಿತೆಯ ಶೀರ್ಷಿಕೆಯು, ‘ಐ ಡೋಂಟ್ ಅಗ್ರೀ ‘ ಅಂದರೆ ‘ನಾನು ಒಪ್ಪುವುದಿಲ್ಲ’ ಎಂದಾಗಿದೆ. ಹಿಂದಿ, ಇಂಗ್ಲಿಷ್ ಮತ್ತು ಬೆಂಗಾಲಿ ಭಾಷೆಗಳಲ್ಲಿ ಬರೆದ ಈ ಕವಿತೆಯಲ್ಲಿ, ಕೋಮುವಾದ ಮತ್ತು ಧಾರ್ಮಿಕ ಉಗ್ರವಾದವನ್ನು ಮಾರಾಟ ಮಾಡುವುದರಲ್ಲಿ ನನಗೆ ವಿಶ್ವಾಸ ಇಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಹೇಳಿದ್ದಾರೆ. ಅವರು ಯಾರನ್ನೂ ಹೆಸರಿಸದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಧರ್ಮದ ಹೆಸರಿನಲ್ಲಿ ಧ್ರುವೀಕರಣವನ್ನು ಮಾಡುತ್ತಿದ್ದಾರೆ ಎಂದು ಈ ಹಿಂದೆ ಪದೇ ಪದೇ ಹೇಳುತ್ತಿದ್ದರು.

Leave a Reply