ಮೂರು ಲಕ್ಷಕ್ಕಿಂತಲೂ ಹೆಚ್ಚು ಮತಗಳಿಂದ ಶೀಲಾ ದೀಕ್ಷಿತ್ ರನ್ನು ಸೋಲಿಸಿದ ಬೆನ್ನಲ್ಲೇ ಮನೋಜ್ ತಿವಾರಿ ಶೀಲಾ ದೀಕ್ಷಿತ್ ರನ್ನು ಅವರ ನಿವಾಸದಲ್ಲಿ ಭೇಟಿಯಾದರು.
ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಶನಿವಾರ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅವರಲ್ಲಿ ಆಶೀರ್ವದಿಸಬೇಕೆಂದು ಕೋರಿದರು. ವಾಸ್ತವವಾಗಿ, ಮನೋಜ್ ದೆಹಲಿಯ ಈಶಾನ್ಯ ಲೋಕಸಭಾ ಕ್ಷೇತ್ರದಿಂದ 3,66,102 ಮತಗಳಿಂದ ಶೀಲಾ ರನ್ನು ಸೋಲಿಸಿದರು. ಫಲಿತಾಂಶದ ಮುನ್ನ ಮನೋಜ್ ಮಾತನಾಡುತ್ತ “ಶೀಲಾ ಜಿಯವರನ್ನು ಈ ವಯಸ್ಸಿನಲ್ಲಿ ನನ್ನ ಮುಂದೆ ಚುನಾವಣೆಗೆ ನಿಲ್ಲಿಸಿ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡಿದ್ದಾರೆ ಎಂದು ಹೇಳಿದ್ದರು.

Leave a Reply