ನಾಗ್ಪುರ : ಹಲ್ದೀರಾಂ ನ ವಡಾ ಸಾಂಬಾರ್ ನಲ್ಲಿ ‘ಸತ್ತ ಹಲ್ಲಿ’ ಪತ್ತೆ, ಔಟ್ಲೆಟ್ ಬಂದ್. ಒಂದು ಖಾದ್ಯ ಹಾಗೂ ಔಷಧ ಆಡಳಿತ (ಎಫ್ ಡಿ ಎ) ಅಧಿಕಾರಿಯ ಪ್ರಕಾರ,ನಾಗ್ಪುರದ ಹಲ್ದೀರಾಮ್ ರೆಸ್ಟೋರೆಂಟ್ ನಲ್ಲಿ ಒಬ್ಬ ವ್ಯಕ್ತಿಗೆ ವಡಾ ಸಾಂಬಾರ್ ನಲ್ಲಿ ಸತ್ತ ಹಲ್ಲಿ ಸಿಕ್ಕಿದೆ.
ಅಡುಗೆ ಮನೆಯ ತಪಾಸಣೆಯ ಸಂದರ್ಭದಲ್ಲಿ ಹಲವಾರು ಕೊರತೆಗಳು ಕಂಡು ಬಂದದ್ದರಿಂದ ಅವುಗಳನ್ನು ಸರಿಪಡಿಸುವವರೆಗೆ ಔಟ್ಲೆಟ್ ನ್ನು ಮುಚ್ಚಲಾಯಿತು‌.ಅಲ್ಲದೆ, ಆ ಗ್ರಾಹಕ ಹಾಗೂ ಅವರೊಂದಿಗೆ ಬಂದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಆರೋಗ್ಯ ಅಧಿಕಾರಿಗಳು ಬಳಿಕ ರೆಸ್ಟೋರೆಂಟ್ ಅಡುಗೆ ಕೋಣೆಯನ್ನು ಪರೀಕ್ಷೆ ನಡೆಸಿದಾಗ ಅಲ್ಲಿ ಬಹಳಷ್ಟು ದೋಷಗಳು ಕಂಡು ಬಂದಿದ್ದು, ಬಳಿಕ ಅವರು ರೆಸ್ಟೋರೆಂಟ್ ಮುಚ್ಚಲು ಆದೇಶ ನೀಡಿದರು. ಹಲ್ದಿರಾಮ್ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದು, ಇದೀಗ ಆ ರೆಸ್ಟೋರೆಂಟ್ ನಲ್ಲಿ ಗ್ರಾಹಕರ ಆರೋಗ್ಯದ ವಿಷಯದಲ್ಲಿ ಇಂತಹ ನಿರ್ಲಕ್ಷ್ಯ ಯಾರೂ ಊಹಿಸಿರಲಿಲ್ಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಲಾಗಿದೆ.

Leave a Reply