Pakistani villagers wait outside a hospital to be screened for HIV in the southern province of Sindh. Photograph: Fareed Khan/AP

ಪಾಕಿಸ್ತಾನದಲ್ಲಿ ಒಂದೇ ಜಿಲ್ಲೆಯಲ್ಲಿ 400 ಹೆಚ್ಐವಿ + ಪ್ರಕರಣಗಳು ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಸಿಂಗ್ ಎಂಬಲ್ಲಿ ಸುಮಾರು 400ಮಂದಿ ಹೆಚ್ಐವಿ ಪಾಸಿಟಿವ್ ಸೋಂಕಿಗೆ ಈಡಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಅದಕ್ಕಾಗಿ ಓರ್ವ ವೈದ್ಯರ ಮೇಲೆ ಆರೋಪ ಹಾಕಲಾಗಿದ್ದು, ವೈದರು ಹೆಚ್ಐವಿ ಸಾಂಕ್ರಾಮಿಕ ಸಿರಿಂಜನ್ನು ಬಳಸಿದ ಪರಿಣಾಮವಾಗಿ ಹೀಗೆ ಸಂಭವಿಸಿದೆ ಎಂದು ಹೇಳಲಾಗಿದೆ.
ಓರ್ವ ವೈದ್ಯರ ಪ್ರಕಾರ, ಡಜನ್‌ಗಟ್ಟಲೆ ಜನರು ಏಡ್ಸ್ ಪೀಡಿತರಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬರುತ್ತಿದೆ ಎಂದಿದ್ದಾರೆ…

ಮಕ್ಕಳ ತಜ್ಞ ಮುಜಫರ್ ಗಂಗ್ಹಾರಾವ್ ಅವರನ್ನು ಪೊಲೀಸರು ಬಂಧಿಸಿದ್ದು, ಅವರು ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕತೆಯಿಂದ ಹೀಗೆ ಮಾಡಿದ್ದಾರೆಯೇ ಎಂಬ ಕುರಿತು ತನಿಖೆ ಮಾಡುತ್ತಿದ್ದಾರೆ. ಏಡ್ಸ್ ಹೊಂದಿರುವ ಸಿರಿಂಜಿನಿಂದ ತಮ್ಮ ಮಕ್ಕಳಿಗೆ ಚಿಕಿತ್ಸೆ ಕೊಟ್ಟಿದ್ದಾನೆ ಎಂದು ಕನಿಷ್ಠ 10 ಕುಟುಂಬಗಳು ಆರೋಪಿಸಿದ್ದಾರೆ ಎಂದು ನಗರದ ಪೊಲೀಸ್ ಅಧಿಕಾರಿ ಸರ್ತಾಜ್ ಹೇಳಿದ್ದಾರೆ. ಆದರೆ ತಾನು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ ಎಂದು ವೈದ್ಯರು ಪೊಲೀಸರೊಂದಿಗೆ ಹೇಳಿದ್ದು, ಈಗಾಗಲೇ ನಾಲ್ಕು ಮಕ್ಕಳು ಸಾವಿಗೀಡಾಗಿದ್ದಾರೆ.

Leave a Reply