ಶಿಕ್ಷಣದ ಈ ವ್ಯವಸ್ಥೆ ಒಟ್ಟು ಸಮಾಜದ ಒಂದು ಬಿಂಬವೂ ಹೌದು. ಪ್ರಸ್ತುತ ಸಮಾಜ ಮುಂದಿನ ಪೀಳಿಗೆಗೆ ಸಕಲ ಸಂಸ್ಕೃತಿಯನ್ನು ಧಾರೆ ಎರೆಯುವ ಮುಖ್ಯವಾಹಿನಿಯೂ ಹೌದು! ಆದುದರಿಂದಲೇ “ಶಿಕ್ಷಣದಲ್ಲಿ ಶಿಕ್ಷೆ’ ಅಷ್ಟು ಚರ್ಚೆಗೆ ಈಡಾಗುವುದು. ಆದರೆ ಕೆಲವೊಮ್ಮೆ ಶಿಕ್ಷಕರು ಮಕ್ಕಳೊಂದಿಗೆ ಕ್ರೂರವಾಗಿ ವರ್ತಿಸುವ ಘಟನೆಗಳು ಆಗಾಗ ನಮ್ಮ ಮುಂದೆ ಬರುತ್ತಾ ಇದೆ.
ನೀಡಿದ ಕೆಲಸ ಪೂರ್ಣಗೊಳಿಸದ್ದಕ್ಕೆ ಮಕ್ಕಳಿಂದಲೇ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಕೆನ್ನೆಗೆ 168 ಏಟುಗಳನ್ನು ಹಾಕಿಸಿದ ಘಟನೆ ನಡೆದಿದೆ. ಶಿಕ್ಷಣಕನನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ಝಾಬುವಾ ಜಿಲ್ಲೆಯಲ್ಲಿ ಶಿಕ್ಷಕರೋರ್ವರು ಹೋಮ್ ವರ್ಕ್ ಮಾಡದ್ದಕ್ಕೆ ವಿದ್ಯಾರ್ಥಿಗೆ ಅವಳ ಸಹಪಾಠಿಗಳಿಂದಲೇ 168 ಬಾರಿ ಕೆನ್ನೆಗೆ ಹೊಡೆಸಿದ್ದಾರೆ.

ಶಿಕ್ಷಕನನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಈ ಘಟನೆ 2018 ರಲ್ಲಿ ನಡೆದಿದ್ದು ವಿದ್ಯಾರ್ಥಿನಿ ಆರನೇ ತರಗತಿಯಲ್ಲಿದ್ದಳು.ಹುಡುಗಿಯ ತಂದೆ ಜವಾಹರ ನವೋದಯ ವಿದ್ಯಾಲಯ ಶಿಕ್ಷಕ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ ನಂತರ ಈ ಘಟನೆ ಬೆಳಕಿಗೆ ಬಂತು.

Leave a Reply