ಒಂದೇ ಒಂದು ರೂಪಾಯಿ ಖರ್ಚಿಲ್ಲದೆ ಮಹಾರಾಷ್ಟ್ರದ ರಾವ್ ಪಾಟೀಲ್ ರಿಗೆ ವಾರಣಾಸಿಯಲ್ಲಿ 2134 ಮತಗಳು ದೊರೆತಿವೆ. ವಾರಣಾಸಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವಿರುದ್ಧ ಮೈದಾನಕ್ಕಿಳಿದ 25 ಅಭ್ಯರ್ಥಿಗಳಲ್ಲಿ ಆನಂದ್ ರಾವ್ ಪಾಟೀಲ್ ಹಾಗೂ ಮಾನವ್ ಸಹಿತ ಹಲವು ಇಂತಹ ಅಭ್ಯರ್ಥಿಗಳು ಒಂದೇ ಒಂದು ರೂಪಾಯಿ ಖರ್ಚಿಲ್ಲದೆ ಜನತೆಯ ಮತ ಗಳಿಸಿದ್ದಾರೆ. ಮಹಾರಾಷ್ಟ್ರದ ಮನೋಹರ್ ಆನಂದ್ ರಾವ್ ಪಾಟೀಲ್ ಗಾಂಧಿಯ ವೇಷ ಭೂಷಣಗಳಲ್ಲಿ ಸುತ್ತಾಡಿ ಜನತೆಯಿಂದ ಮತ ಯಾಚಿಸಿದ್ದರು. ಇವರಿಗೆ 2,134 ಮತಗಳು ಲಭಿಸಿವೆ.

 

Leave a Reply