Image : BBC Hindi

ಗದ್ದೆಯಲ್ಲಿ ಮೃತ ಮಹಿಳೆಯ ಬಳಿ 1 ವರ್ಷ ವಯಸ್ಸಿನ, ಗಾಯಗೊಂಡ ಮಗು ಬಳಿ 4 ದಿನಗಳ ಕಾಲ ಬದುಕಿತ್ತು.ಬಾಗ್ಪತ್(ಉತ್ತರ ಪ್ರದೇಶ)ದ ಗದ್ದೆಯೊಂದರಲ್ಲಿ 4 ದಿನಗಳ ಕಾಲ ಹಸಿವು ಬಾಯಾರಿಕೆಯಿಂದ ಬಳಲಿದ ಮಗುವೊಂದು ಅಂಬೆಗಾಲಿಡುತ್ತಾ ಒಂದು ಧಾರ್ಮಿಕ ಸ್ಥಾನ ತಲುಪಿದ್ದು, ಜನರು ಆಸ್ಪತ್ರೆಗೆ ಸೇರಿಸಿದ್ದಾರೆ. ಮಗು ಗಾಯಗೊಂಡ ಸ್ಥಿತಿಯಲ್ಲಿ 4 ದಿನಗಳ ಕಾಲ ಓರ್ವ ಮೃತ ಮಹಿಳೆಯ ಪಕ್ಕದಲ್ಲಿ ಇತ್ತು.ಮೃತ ಮಹಿಳೆ ಮಗುವಿನ ತಾಯಿಯಿರಬಹುದು ಎಂದು ಹೇಳಲಾಗುತ್ತಿದೆ. ಗದ್ದೆಯಲ್ಲಿ ಒಂದು ಮಹಿಳೆಯ ಶವ ಬಿದ್ದಿದೆ, ಅದರ ಪಕ್ಕದಲ್ಲಿ ಮಗು ಇದೆ ಎಂದು ಗ್ರಾಮದ ಮುಖ್ಯಸ್ಥ ಪೊಲೀಸ್ ಠಾಣೆಗೆ ತಿಳಿಸಿದ ಬಳಿಕ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಳಿಕ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಮಗುವಿಗೆ ಗುಡಿಯ ಎಂದು ಹೆಸರಿಡಲಾಗಿದ್ದು, ಮಗುವಿನ ತಾಯಿಯ ಮರಣ ಹೇಗೆ ಸಂಭವಿಸಿದೆ ಎಂಬ ಬಗ್ಗೆ ನಿಖರ ಮಾಹಿತಿ ಇದುವರೆಗೆ ಸಿಕ್ಕಿಲ್ಲ. ಉತ್ತರ ಪ್ರದೇಶದ ಮಹಿಳಾ ಕಾನ್ಸ್ಟೆಬಲ್ ತಾಯಿಯಂತೆ ಆ ಮಗುವಿನ ಆರೈಕೆ ಮಾಡಿದ್ದು, ಈಗ ಮಗು ಆರೋಗ್ಯವಾಗಿದೆ.

Leave a Reply