courtesy ; Mediaone

ನಿಲಕಲ್: ಶಬರಿಮಲೆಯ ಸಂರಕ್ಷಣಾ ಸಮಿತಿಯ ಹೆಸರಲ್ಲಿ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು ಶಬರಿ ಮಲೆಯ ಹಾದಿಯ ನಿಲಕಲ್ ಎಂಬಲ್ಲಿ ಬಸ್ಸುಗಳನ್ನು ತಡೆದು ನಿಲ್ಲಿಸಿ ಮಹಿಳೆಯರನ್ನು ಬಲಾತ್ಕಾರವಾಗಿ ಇಳಿಸುವ ಪ್ರಯತ್ನ ನಡೆದಿದೆ. ಶಬರಿ ಮಲೆಯ ಪ್ರದೇಶಗಳನ್ನು ಸಂದರ್ಶಿಸಲು ಬಂದ ಪತ್ರಕರ್ತೆಯರ ಸಹಿತ ಯುವತಿಯರನ್ನು ಬಸ್ಸಿನಿಂದ ಇಳಿಸಲಾಗಿದೆ. ಎಲ್ಲಾ ಬಸ್ಸುಗಳನ್ನು ತಡೆದು ಮಹಿಳೆಯರಿದ್ದಾರೆಯೇ ಎಂದು ಹುಡುಕುವ ಮಹಿಳೆಯರು ಹತ್ತರಿಂದ ನಲವತ್ತರ ಪ್ರಾಯದ ಮಿತಿಯವರನ್ನು ಬಸ್ಸಿನಿಂದ ಇಳಿಸುತ್ತಿದ್ದಾರೆ.

ನಾವು ಬಸ್ಸಿನಿಂದ ಮಹಿಳೆಯರನ್ನು ಇಳಿಸಿ ಅವರನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತಿದ್ದೇವೆ ಎಂದು ಮೊದಲು ಹೇಳಿದ್ದರೂ ನಂತರ ಎಲ್ಲಾ ವಾಹನಗಳನ್ನು ತಡೆದು ಮಹಿಳೆಯರಿದ್ದಾರೆಯೇ ಎಂದು ತಪಾಸಿಸುತ್ತಿದ್ದಾರೆ. ಮಾತ್ರವಲ್ಲ ಇಳಿಯೋ ಕೆಳಗೆ ಬಾರೇ.. ಎಂಬಂತಹ ಏಕ ವಚನಗಳನ್ನು ಬಳಸುತ್ತಿದ್ದಾರೆ. ಇವರ ಆಕ್ರೋಷದ ಮಾತು ಕೇಳಿ ಬೆದರಿ ವಿದ್ಯಾರ್ಥಿನಿಯರ ಸಹಿತ ಬಸ್ಸಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದಾರೆಂದು ವರದಿಯಾಗಿದೆ.

Leave a Reply