ಇದು ನಮ್ಮ ಊರು: ಭಿಕ್ಷುಕರೆಂದರೆ ಸಾಮಾನ್ಯವಾಗಿ ತಮ್ಮ ಹೊಟ್ಟೆ ತುಂಬಿಸುವ ಸಲುವಾಗಿ ಭಿಕ್ಷೆ ಬೇಡುತ್ತಾರೆ. ಆದರೆ ಇಲ್ಲೊಬ್ಬಳು ಭಿಕ್ಷುಕಿ ಭಿಕ್ಷೆ ಬೇಡಿ ಕೋಟ್ಯಾಧೀಶೆಯಾದ ಆದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಈಜಿಪ್ಟ್ ದೇಶದಿಂದ ವರದಿಯಾಗಿದ್ದು, 57 ವರ್ಷದ ಭಿಕ್ಷುಕಿ ಮಹಿಳೆ ನಫೀಸಾ ಬಳಿ ಎರಡು ಬ್ಯಾಮ್ಕ್ ಅಕೌಂಟ್ ನಲ್ಲಿ ಸುಮಾರು ಒಂದು ಕೋಟಿ ನಲವತ್ತೆರಡು ಲಕ್ಷ ಹಣ ಇರುವುದಾಗಿ ತಿಳಿದು ಬಂದಿದೆ.

ಈ ಮಹಿಳೆ ವೀಲ್ ಚೇರ್ ನಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದಳು ಎನ್ನಲಾಗಿದೆ. ಅವಳು ತನಗೆ ಕಾಲುಗಳು ಇಲ್ಲದಂತೆ ತನ್ನನ್ನು ತೋರಿಸಿಕೊಳ್ಳುತ್ತಿದ್ದಳು. ಅವಳು ಈಜಿಪ್ಟಿನ ಅನೇಕ ರಾಜ್ಯಗಳಲ್ಲಿ ಸುತ್ತಾಡಿ ಭಿಕ್ಷಾಟನೆ ಮಾಡುತ್ತಿದ್ದಳು. ಭಿಕ್ಷೆ ಬೇಡುವ ಸಮಯದಲ್ಲಿ ಮಾತ್ರ ಮಹಿಳೆ ವೀಲ್ ಚೇರ್ ನಲ್ಲಿ ಇರುತ್ತಿದ್ದಳು. ಉಳಿದ ಸಮಯದಲ್ಲಿ ಅವಳು ಸಾಮಾನ್ಯರಂತೆ ಕಾಲುಗಳಿಂದ ನಡೆಯುತ್ತಿದ್ದಳು. ಆಕೆ ತನ್ನ ಕಾಲುಗಳಲ್ಲಿ ನಡೆದುಕೊಂಡು ಹೋಗುವುದನ್ನು ಒಬ್ಬ ವ್ಯಕ್ತಿಯು ನೋಡಿದಾಗ, ವಿಷಯವು ಬಹಿರಂಗವಾಗಿದೆ.

ಇದೀಗ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಕೆಯ ಎರಡು ಬ್ಯಾಂಕ್ ಅಕೌಂಟ್ ಗಳಲ್ಲಿ ಒಟ್ಟು ಒಂದು ಕೋಟಿಯ ನಲವತ್ತೆರಡು ಲಕ್ಷ ಪತ್ತೆಯಾಗಿದೆ. ಈಕೆಯ ಬಳಿ ಇಷ್ಟು ಹಣ ಎಲ್ಲಿಂದ ಬಂತು ಎಂದು ಪೊಲೀಸರು ಪ್ರಕರಣದ ಜಾಡು ಹುಡುಕುತ್ತಿದ್ದಾರೆ.

Leave a Reply