ಚೆನ್ನೈ: ವಿಶ್ವದ ಹಿರಿಯಣ್ಣ ಎಂದೇ ಕರೆಯಲ್ಪಡುವ ಅಮೆರಿಕದ ಅಧ್ಯಕ್ಷ ಯಾರಾಗುತ್ತಾರೆ ಎಂದು ಜಗತ್ತೇ ಕುತೂಹಲದಿಂದ ಕಾದಿದೆ. ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಲಿ ಎಂದು ಟ್ರಂಪ್ ಹಾಗೂ ಬೈಡನ್ ಬೆಂಬಲಿಗರು ಹಾರೈಸಿ ಪ್ರಾರ್ಥನೆಯಲ್ಲಿ ಮುಳುಗಿದ್ದಾರೆ.

ಇದೇ ಸಮಯದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂಬಂಧ ತಮಿಳುನಾಡಿನ ಪೈಂಗನಾಡು ಗ್ರಾಮದ ದೇವಸ್ಥಾನವೊಂದರಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಗೆಲುವಿಗೆ ಪೂಜೆ ಸಲ್ಲಿಸಲಾಗಿದೆ. ಏಕೆಂದರೆ, ನವೆಂಬರ್ 3ರಂದು ಅಮೆರಿಕದಲ್ಲಿ ನಡೆಯಲಿರುವ ಮತದಾನದಲ್ಲಿ ಟ್ರಂಪ್ ಹಾಗೂ ಬೈಡನ್‌ರ ಭವಿಷ್ಯವಷ್ಟೇ ಅಲ್ಲ, ಡೆಮೋಕ್ರೆಟಿಕ್ ಪಕ್ಷದ ಅಭ್ಯರ್ಥಿ, ಕಮಲಾ ಹಾರಿಸ್ ಅವರ ಭವಿಷ್ಯವೂ ನಿರ್ಧಾರವಾಗಲಿದೆ. ಈ ಕಾರಣಕ್ಕೆ ಕಮಲಾ ಹ್ಯಾರಿಸ್ ಅವರ ಪೂರ್ವಜರ ಊರಾದ ಫೈಂಗನಾಡು ಗ್ರಾಮಸ್ಥರು ಕಮಲಾ ಹ್ಯಾರಿಸ್ ಗೆಲುವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ.

ಕಮಲಾ ಅವರ ತಾತ ಪಿ.ವಿ. ಗೋಪಾಲನ್‌ರವರು ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದರು. ಅವರ ಪೂರ್ವಜರು ಈ ದೇವಸ್ಥಾನಕ್ಕೆ ದೇಣಿಗೆಯನ್ನು ನೀಡಿದ್ದರು. ಈಗ ಅದೇ ದೇವಸ್ಥಾನದಲ್ಲಿ ಕಮಲಾ ಪರವಾಗಿ ಪೂಜೆ ಸಲ್ಲಿಸಿದ್ದು ಗ್ರಾಮದಲ್ಲಿ ಕಮಲಾ ಅವರಿಗೆ ಶುಭ ಕೋರುವ ಫಲಕಗಳು, ಕಟೌಟ್‌ಗಳು ತಲೆಯೆತ್ತಿದ್ದು ಅಮೆರಿಕ ಚುನಾವಣೆಯ ಫಲಿತಾಂಶವನ್ನು ಇಲ್ಲಿನ ಮಂದಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

Leave a Reply