ಏಳರ ಹರೆಯದ ಝೈನಬ್ ಎಂಬ ಬಾಲಕಿಯ ಸಹಿತ ಹಲವರನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣದ ಆರೋಪಿ ಇಮ್ರಾನ್ ನನ್ನು ಪಾಕಿಸ್ತಾನವು ಇಂದು ಗಲ್ಲಿಗೇರಿಸಿತು.

ಇಂದು ಬೆಳಿಗ್ಗೆ ಲಾಹೋರ್‍ನ ಕೋಟ್ ಲಖ್‍ಪತ್ ಜೈಲಿನಲ್ಲಿ ಈತನನ್ನು ಗಲ್ಲಿಗೇರಿಸಲಾಯಿತು. ಗಲ್ಲಿಗೇರಿಸುವಾಗ ಝೈನಬ್ ತಂದೆ ಅಮೀನ್ ಅನ್ಸಾರಿ ಅಲ್ಲದೆ ಜೈಲರ್, ನ್ಯಾಯಾಧೀಶ ಮತ್ತು ವೈದ್ಯಾಧಿಕಾರಿಗಳೂ ಹಾಜರಿದ್ದರು. ಆತನ ಮೃತ ಶರೀರ ಪಡೆಯಲು ನಾಲ್ವರು ಸಂಬಂಧಿಕರೂ ಆಗಮಿಸಿದ್ದರು. ಗಲ್ಲು ಶಿಕ್ಷೆ ನೀಡುವಾಗ ಸುತ್ತಲೂ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೋರ್ಟ್ ಇದನ್ನು ಇನ್ನಿತರ ಕಾರಣ ನೀಡಿ ತಳ್ಳಿ ಹಾಕಿತ್ತು.

ಗಲ್ಲು ಶಿಕ್ಷೆ ರದ್ದು ಪಡಿಸಲು ಆರೋಪಿ ಸಲ್ಲಿಸಿದ್ದ ಅಜಿಯನ್ನು ನ್ಯಾಯಾಲಯ ತಳ್ಳಿ ಹಾಕಿತ್ತು. ಸಾರ್ವಜನಿಕ ಸ್ಥಳದಲ್ಲಿ ಈತನನ್ನು ಗಲ್ಲಿಗೇರಿಸಬೇಕೆಂಬ ಝೈನಬ್ ತಂದೆಯ ಅರ್ಜಿ ಸಲ್ಲಿಸಿದ್ದರು.

ಈತ ಝೈನಬ್ ಸಹಿತ ಏಳು ಬಾಲಕಿಯರನ್ನು ಕೊಂದಿದ್ದ. ಝೈನಬ್ ಸಾವು 2017ರಲ್ಲಿ ಪಾಕಿಸ್ತಾನದಲ್ಲಿ ಭಾರೀ ಪ್ರತಿಭಟನೆಗಳಿಗೆ ಕಾರಣವಾಗಿ ಪೋಲೀಸರ ಗುಂಡಿಗೆ ಇಬ್ಬರು ಪ್ರತಿಭಟನಾಕಾರರು ಬಲಿಯಾಗಿದ್ದರು.

Leave a Reply