ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮಾದಕವಸ್ತು ಬಳಸಿ ಮತ್ತೇರಿಸಿಕೊಂಡಂತೆ ನಕಲಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರ್ಷ್‍ಸೋಫ್ಟ್ ಎನ್ನುವ ನಕಲಿ ಅಕೌಂಟಿನಲ್ಲಿ ವೀಡಿಯೊ ಅಪ್‍ಲೋಡ್ ಮಾಡಲಾಗಿತ್ತು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ತೀವ್ರ ವೇಗದಲ್ಲಿ ವೈರಲ್ ಆಗಿದ್ದ ವೀಡಿಯೊವನ್ನು ಪೊಲೀಸರು ಸಾಮಾಜಿಕ ಮಾಧ್ಯಮದಿಂದ ತೆರವುಗೊಳಿಸಿದ್ದಾರೆ.
ಅಮರೀಂದರ್ ಸಿಂಗ್‍ರ ನಕಲಿ ವೀಡಿಯೊದೊಂದಿಗೆ ಅವರೆಂದು ಅನಿಸುವ ಧ್ವನಿಯನ್ನುಸೇರಿಸಿ ವೀಡಿಯೊ ನಿರ್ಮಾಣವಾಗಿದೆ. ಮಾದಕವಸ್ತು ಉಪಯೋಗಿಸಿ ಕ್ಷೀಣ ಧ್ವನಿಯಲ್ಲಿ ಮುಖ್ಯಮಂತ್ರಿ ಮಾತಾಡುತ್ತಿರುವಂತೆ ವೀಡಿಯೊ ಚಿತ್ರೀಕರಿಸಲಾಗಿದೆ.ಮುಖ್ಯಮಂತ್ರಿಯನ್ನು ಅಪಮಾನಿಸಲು ಉದ್ದೇಶಪೂರ್ವಕವಾಗಿ ವೀಡಿಯೊ ನಿರ್ಮಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದರು.
ಭಾರತದ ದಂಡ ಸಂಹಿತೆ ಮತ್ತು ಐಟಿ ಕಾನುನಿನ ವಿವಿಧ ಕಲಂಗಳ ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ. ಚೈನೀಸ್ ಆಪ್ ಟಿಕ್‍ಟಾಕ್ ಉಪಯೋಗಿಸಿ ವೀಡಿಯೊ ತಯಾರಿಸಲಾಗಿದೆ ಎಂದು ಸೈಬರ್ ಸೆಲ್ ಪೊಲೀಸರು ಹೇಳಿದರು.
ಯೂತ್ ಗ್ರೂಪ್ ನಭಸ್ ಎನ್ನುವ ಹೆಸರಿನಲ್ಲಿ ವಾಟ್ಸ್‍ಆಪ್ ಗ್ರೂಪಿನಲ್ಲಿ ವೀಡಿಯೊ ಮೊದಲು ಕಂಡು ಬಂದಿತ್ತು. ನಂತರ ಫೇಸ್‍ಬುಕ್‍ನಲ್ಲಿ ವೇಗವಾಗಿ ವೈರಲ್ ಆಗಿದೆ.