ದೋಹಾ : ಹಿಜಾಬ್ ಧರಿಸುವುದರಿಂದ ನನಗೆ ವೇಗವಾಗಿ ಓಡಲು ಸಾಧ್ಯ ಆಗದಿರಬಹುದು. ಅದು ಕೆಲವೊಮ್ಮೆ ನನಗೆ ಅಡಚಣೆಯಾದರೂ ನನಗೆ ಅದು ಆರಾಮವಾಗಿದೆ ಎಂದು ಕತಾರ್ ನ ಅಥ್ಲೀಟ್ ಮರಿಯಮ್ ಹೇಳಿದ್ದಾರೆ.

ಹಿಜಾಬ್ ಧರಿಸುವುದನ್ನು ಯಾವ ಬ್ರಾಂಡ್ ಕಂಪೆನಿಗಳೂ ಬೆಂಬಲಿಸುವುದಿಲ್ಲ. ಮಹಿಳೆಯರಿಗೆ ಸ್ಪೋರ್ಟ್ಸ್ ಗೆ ಪೂರಕವಾದ ಹಿಜಾಬ್ ರೂಪಿಸಬೇಕು. ನಾನು ಸ್ವಂತ ವ್ಯಾಪಾರ ಪ್ರಾರಂಭಿಸ ಬಯಸುತ್ತೇನೆ. ಅದರಿಂದ ಉದಯೋನ್ಮುಖ ಅಥ್ಲೀಟ್ ಗಳಿಗೆ ನೆರವಾಗುತ್ತೇನೆ. ಇತ್ತೀಚಿಗೆ ನನಗೆ ನೈಕ್ ಕಂಪೆನಿ ಹಿಜಾಬ್ ನೀಡಿತ್ತು ಅದು ಬಹಳ ಕೆಟ್ಟದಾಗಿತ್ತು ಎಂದು ನಗುತ್ತಾ ಮರಿಯಮ್ ಹೇಳುತ್ತಾರೆ.

ನೈಕ್ ಅಡಿಡಾಸ್ ನಂತಹ ಬ್ರಾಂಡ್ ಗಳು ನಮಗೆ ಸುಂದರವಾದ ಹಿಜಾಬ್ ವಸ್ತ್ರವನ್ನು ನೀಡಬೇಕು. ಹಿಜಾಬ್ ಧರಿಸುವುದರಿಂದ ನಮ್ಮ ಸೌಂದರ್ಯ ಕಡಿಮೆ ಆಗುವುದಿಲ್ಲ. ಧರ್ಮ ಮತ್ತು ಫ್ಯಾಷನ್ ಜೊತೆಗೆ ಸಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಕತಾರ್ ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾ ಕೂಟ ಆಯೋಜಿಸುವಲ್ಲಿ ಆಕೆ ಪ್ರಮುಖ ಪಾತ್ರ ವಹಿಸಿದ್ದಳು. ಅರಬ್ ಜಗತ್ತಿನ ಕುರಿತು ಪಾಶ್ಚಿಮಾತ್ಯ ದೇಶಗಳಲ್ಲಿರುವ ಕಲ್ಪನೆಯನ್ನು ಬದಲಿಸಲು ಇದು ಅಗತ್ಯ ಎಂದು ಸಮಿತಿಯ ಮುಂದೆ ದೃಢವಾಗಿ ವಾದಿಸಿದ್ದಳು.

ಮುಂದಿನ ವರ್ಷ ದೋಹಾ ಕ್ರೀಡಾ ಕೂಟ ನಡೆಸಲಿದ್ದು ಮರಿಯಮ್ ಅದರಲ್ಲಿ 400 ಮೀಟರ್ ಹರ್ಡಲ್ಸ್ ನಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.

Leave a Reply