ಹೊಸದಿಲ್ಲಿ: ಬ್ಯಾಂಕಿಗೆ 5000 ಕೋಟಿ ರೂಪಾಯಿ ವಂಚಿಸಿದ ಗುಜರಾತ್ ಔಷಧ ಕಂಪೆನಿಯ ಮಾಲಕ ನಿತಿನ್ ಸಂದೇಶಾರ ಮತ್ತು ಕುಟುಂಬ ನೈಜೀರಿಯಕ್ಕೆ ಪರಾರಿಯಾಗಿದ್ದಾರೆ. ಸಂದೇಶಾರ ದುಬೈಯಲ್ಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈತ ಮತ್ತು ಕುಟುಂಬ ನೈಜೀರಿಯಕ್ಕೆ ಪಲಾಯನ ಮಾಡಿದ್ದಾರೆ ಎಂದು ಸಿಬಿಐ -ಎಂಫೋಸ್‍ಮೆಂಟ್ ನಿರ್ದೇಶಾನಾಲಯದಿಂದ ಮಾಹಿತಿ ಲಭಿಸಿದೆ.

ಅಪರಾಧಿಗಳ ಹಸ್ತಾಂತರದ ವಿಷಯದಲ್ಲಿ ಭಾರತ ಮತ್ತು ನೈಜೀರಿಯಗಳ ನಡುವೆ ಒಪ್ಪಂದ ಆಗಿಲ್ಲ. ಈ ಪರಿಸ್ಥಿತಿಯ ಲಾಭವನ್ನು ಸಂದೇಶಾರ ಮತ್ತು ಕುಟುಂಬ ಪಡೆಯಲಿದೆ. ಆದ್ದರಿಂದಲೇ ತಾನು ಪಾರಾಗುವ ತಾಣವಾಗಿ ನೈಜೀರಿಯವನ್ನು ಆಯ್ದುಕೊಂಡಿದ್ದಾರೆ ಎನ್ನಲಾಗಿದೆ. ಭಾರತದ ಪಾಸ್‍ಪೋರ್ಟಿನಲ್ಲಿ ನೈಜೀರಿಯಾಕ್ಕೆ ಹೋಗಿದ್ದಾರೆಯೇ ಅಥವಾ ನೈಜೀರಿಯಕ್ಕೆ ಹೋಗಲು ಬೇರೆ ದೇಶಗಳ ದಾಖಲೆಗಳನ್ನು ಬಳಸಿದ್ದಾರೆಯೇ ಎಂದು ಸ್ಪಷ್ಟವಾಗಿಲ್ಲ.

ವಡೋದರ ಕೇಂದ್ರವಾಗಿಟ್ಟು ಕಾರ್ಯಾಚರಿಸುವ ಸ್ಟರ್ಲಿಂಗ್ ಬಯೊಟೆಕ್ ಕಂಪೆನಿ 5000 ಕೋಟಿ ರೂಪಾಯಿ ಸಾಲ ಪಡೆದು ಪಾವತಿಸಿದೆ ಉಳಿಸಿಕೊಂಡಿದೆ. ಆಂಧ್ರ ಬ್ಯಾಂಕಿನಿಂದ ಕಂಪೆನಿಯ ನಿರ್ದೇಶಕರು ಸಾಲ ಪಡೆದಿದ್ದಾರೆ. ನಿರ್ದೇಶಕರಾದ ನಿತಿನ್ ಸಂದೇಶಾರ,ಚೇತನ್ ಸಂದೇಶಾರ,ದೀಪ್ತಿಸಂದೇಶಾರ,ರಾಜ್‍ಭೂಷಣ್ ಓಂಪ್ರಕಾಶ್ ದೀಕ್ಷಿತ್,ವಿಲಾಸ್ ಜೋಷಿ,ಚಾರ್ಟೆಡ್ ಅಕೌಂಟೆಂಟ್ ಹೇಮಂತ್ ಹಾತಿ,ಆಂಧ್ರ ಬ್ಯಾಂಕಿನಮಾಜಿ ನಿರ್ದೇಶಕ ಅನೂಪ್ ಗಾರ್ಗ್‍ವಿರುದ್ಧ ಸಿಬಿಐ ಮತ್ತು ಇಡಿ ಕೇಸು ದಾಖಲಿಸಿಕೊಂಡಿದೆ.

Leave a Reply