ಉನ್ನಾವ: ತೀಕ್ಷ್ಣಮಾತುಗಾರಿಕೆಯಿಂದ ಸದಾ ಸುದ್ದಿಯಲ್ಲಿರುವ ಉನ್ನಾವ್‍ನ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ರಾಮಮಂದಿರ ನಿರ್ಮಾಣದ ಕುರಿತು ಪನಃ ಹೇಳಿಕೆ ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯ ಮೊದಲು ಮಂದಿರ ನಿರ್ಮಾಣ ಆಗದಿದ್ದರೆ ಬಂಡಾಯದ ನಿಲುವು ತಳೆಯಬೇಕಾದೀತು ಎಂದು ಹೇಳಿದ್ದಾರೆ.

ನಾನು ಈಗಲೂ ಭಗವಾನ್ ಶ್ರೀರಾಮನ ಕೃಪೆಯಲ್ಲಿದ್ದೇನೆ. ಭಾರತೀಯ ಜನತಾ ಪಾರ್ಟಿ ಇಂದು ಯಾವ ಸ್ಥಾನಕ್ಕೆ ತಲುಪಿದೆಯೋ ಅದರಲ್ಲಿ ಭಗವಾನ್ ರಾಮ ಮತ್ತು ಸಂತರ ಕೊಡುಗೆ ಇದೆ. ದಿಲ್ಲಿಯ ಬೈಠಕ್‍ನಲ್ಲಿ ಸಂತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ.ರಾಮಮಂದಿರ ವಿಷಯದಲ್ಲಿ ತನ್ನ ಬೆಂಬಲ ಸಂತರಿಗಾಗಿದೆ ಎಂದುಸಾಕ್ಷಿ ಮಹಾರಾಜ್ ಹೇಳಿದರು.

ರಾಮಮಂದಿರ ನಿರ್ಮಾಣದ ಕುರಿತು ಅಮಿತ್ ಶಾ ಅಥವಾ ನರೇಂದ್ರ ಮೋದಿ ಮಾತಾಡಿದರೆ ಈ ವಿಷಯವನ್ನು ಬಿಜೆಪಿ ತಂದಿದೆ ಎನ್ನುತ್ತಾರೆ.ಆದರೆ ಈ ವಿಷಯ ದೇಶದ ಎಲ್ಲ ಹಿಂದೂಗಳಿಗೆ ಸಂಬಂಧಿಸಿದ್ದಾಗಿದೆ.ಬಿಜೆಪಿ ಮಂದಿರ ನಿರ್ಮಿಸದಿದ್ದರೆ ನಾವು ಮಂದಿರ ನಿರ್ಮಿಸಲು ಸಮರ್ಥರಿದ್ದೇವೆ ಎಂದು ಸಾಕ್ಷಿ ಮಹಾರಾಜ್ ಈ ಹಿಂದೆ ಹೇಳಿದ್ದರು.

Leave a Reply