ಸಾಂದರ್ಭಿಕ ಚಿತ್ರ

ನಾನು ವಿದ್ಯಾರ್ಥಿನಿ, ಗರ್ಲ್ ಹಾಸ್ಟೆಲ್‌ನಲ್ಲಿ ಇದ್ದೇನೆ. ನನ್ನ ಗಳತಿಗೆ ಬಾಯ್‌ಫ್ರೆಂಡ್ ಇದ್ದಾನೆ. ಇವರಿಬ್ಬರೂ ಬೇರೆಬೇರೆ ಜಾತಿಯವಾದ ಕಾರಣ ಮದುವೆ ಮಾಡಿಕೊಳ್ಳುವಂತಿಲ್ಲ. ಮದುವೆಯಾಗುವವರಗೆ ಜತೆಯಾಗಿ ಇರುತ್ತೇವೆ ಎಂದು ನನ್ನ ಗೆಳತಿ ಹೇಳುತ್ತಾಳೆ. ಜತೆಯಲ್ಲಿ ಸುತ್ತಾಡುತ್ತಾರೆ. ಬೀಚ್, ಶಾಪಿಂಗ್ ಹೋಗುವಾಗ ಒಮ್ಮೊಮ್ಮೆ ನಾನು ಕೂಡಾ ಅವರ ಜತೆ ಹೋಗುತ್ತೇನೆ.

ನನ್ನ ಗೆಳತಿ ಅವನ ಜತೆ ಈಗಾಗಲೇ ಕೆಲವು ಬಾರಿ ಮಾಡಬಾರದ್ದನ್ನು ಮಾಡಿದ್ದಾಳೆ. ಈ ಬಗ್ಗೆ ಚರ್ಚಿಸುವುದರಿಂದ ಇದನ್ನು ಆಕೆ ಮುಚ್ಚುಮರೆಯಿಲ್ಲದೆ ನನ್ನ ಬಳಿ ಹೇಳಿದ್ದಾಳೆ. ನಾನು ನೀವಿಬ್ಬರೂ ಫ್ರೆಂಡ್ ಆಗಿರಿ, ಆದರೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದರೂ ಆಕೆ ಕೇಳುತ್ತಿಲ್ಲ. ನನಗೆ ತಿಳಿದಂತೆ ಅವಳ ಬಾಯ್ ಫ್ರೆಂಡ್ ಒಳ್ಳೆಯವನಲ್ಲ, ಅವನಿಗೆ ಇನ್ನೂ ಕೆಲವು ಮಂದಿ ಗರ್ಲ್ ಫ್ರೆಂಡ್ ಇದ್ದಾರೆ. ಅವನು ನನ್ನ ಜತೆಯೂ ಕ್ಲೋಸ್ ಆಗಿರುವುದರಿಂದ ಮಾತಾಡುತ್ತಾ ನನ್ನ ಜೊತೆಯೂ ಸಲುಗೆ ಬೆಳೆಸುತ್ತಿದ್ದಾನೆ. ಆತ ನನ್ನ ಮೊಬೈಲ್‌ಗೂ ಪದೇ ಪದೇ ಮೆಸೇಜ್, ಕಾಲ್ ಮಾಡುತ್ತಾನೆ. ನಾವಿಬ್ಬರೂ ಒಮ್ಮೆ ಎಲ್ಲಿಗಾದರೂ ತಿರುಗಾಡಲು ಹೋಗೋಣ ಎನುತ್ತಾನೆ. ನನಗೆ ಆತನ ಸಲುಗೆ ಇಷ್ಟವಾಗುವುದಿಲ್ಲ. ಸಾರ್, ನನಗೆ ಸೂಕ್ತ ಸಲಹೆ ಕೊಡಿ

ಸಾಂತ್ವನ : ನೀವು ನಿಮ್ಮ ಸ್ನೇಹಿತೆಗೆ ಬುದ್ದಿವಾದ ಹೇಳಿ ನೀವೇ ಹೊಂಡಕ್ಕೆ ಬೀಳದಿರಿ. ಇದು ಮತ್ತೆ ನಿಮ್ಮ ಜೀವನದ ಸಮಸ್ಯೆಗೆ ಹಾಕಬಹುದು. ಕಾಲೇಜು ಮತ್ತಿತರ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಹರೆಯದ ಹುಡುಗಿಯರೇ ಹೀಗೆ, ಎಷ್ಟು ಬಾರಿ ಎಚ್ಚರಿಸಿದರೂ ಎಡವಿ ಬೀಳುತ್ತಾರೆ. ಹೆತ್ತವರು ವಿಶ್ವಾಸದಿಂದ ನಿಮಗೆ ಸ್ವಾತಂತ್ರ್ಯ ಕೊಟ್ಟು ಕಳುಹಿಸಿರುತ್ತಾರೆ. ಅವರು ಕಷ್ಟ ಪಟ್ಟು ದುಡಿದು ನಿಮಗೆ ಹಣ ಕಳುಹಿಸುತ್ತಾರೆ. ಆದರೆ ಈ ರೀತಿಯ ಕೆಲಸಗಳಲ್ಲಿ ಮುಳುಗಿ ನಿಮ್ಮ ಶಿಕ್ಷಣ ಕ್ಯಾರಿಯರ್ ಎಲ್ಲವೂ ಹಾಳಾಗುತ್ತದೆ.

ಮೊದಲನೆಯದಾಗಿ ನೀವು ಅವರಿಬ್ಬರ ಜೊತೆ ಸುತ್ತಾಡಲು ಹೋದದ್ದೇ ತಪ್ಪು. ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ ಮತ್ತು ನೀವು ಅವರಿಬ್ಬರ ಮಧ್ಯೆ ಯಾವ ಕಾರಣಕ್ಕೂ ಹೋಗದೆ ಕಲಿಕೆಯಲ್ಲಿ ಗಮನ ಹರಿಸಿ. ಬದುಕು ಎಂಬುದು ಕೇವಲ ವಿದ್ಯಾರ್ಥಿ ಜೀವನ ಅಲ್ಲ. ಅದರಾಚೆ ಸಮುದ್ರದಷ್ಟು ದೊಡ್ಡ್ ವಿಶಾಲವಾದ ಜಗತ್ತು ಇದೆ. ಅದರಲ್ಲಿ ಈಜಿ ಗೆಲ್ಲಬೇಕಾದರೆ ಇಂತಹ ಸಿಲ್ಲಿ ವಿಷಯಗಳಿಂದ ದೂರ ಇರಬೇಕು. ನಿಮ್ಮ ಗೆಳತಿಯ ಬಾಯ್ ಫ್ರೆಂಡ್ ಎಂಬ ಸಲುಗೆ ಕೊಟ್ಟದ್ದು ನಿಜವಾಗಿಯೂ ಅತಿಯಾಯಿತು. ಇಲ್ಲಿ ಅವನಷ್ಟೇ ತಪ್ಪು ನಿಮ್ಮದೂ ಇದೆ. ನೀವು ಅವರ ಜತೆ ಸುತ್ತಾಡಿದ್ದು, ಅವನಿಗೆ ಸಲುಗೆ ಬೆಳೆಸಲು ಕಾರಣವೂ ಆಗಿದೆ. ಈಗ ಆತ ಅದನ್ನೇ ದುರುಪಯೋಗಪಡಿಸಲು ಯತ್ನಿಸುತ್ತಿದ್ದಾನೆ. ಒಮ್ಮೆ ಹೋದರೆ ಫೋಟೋ ತೆಗೆದು ಬಳಿಕ ಬ್ಲಾಕ್ ಮೇಲ ಮಾಡಲು ತೊಡಗುತ್ತಾನೆ.

ಸಾಂದರ್ಭಿಕ ಚಿತ್ರ

ಯಾಕೆಂದರೆ ಇದೆಲ್ಲ ಸಮಾಜದಲ್ಲಿ ನಡೆಯುತ್ತಿರುವುದೇ ಆಗಿದೆ. ಆತನ ಉದ್ದೇಶ ಏನೇ ಆಗಿರಬಹುದು. ಆದರೆ ನೀವು ಮಾತ್ರ ನಿಮ್ಮ ಎಚ್ಚರದಲ್ಲಿ ರಲೇ ಬೇಕು. ನೀವು ಆತನ ಮೆಸೇಜ್ ನೋಡಿ ಮೌನವಾದರೆ ಆತ ಮುಂದುವರಿಯದಿರುವ ಸಾಧ್ಯತೆಯಿದೆ. ಆತನಿಗೆ ನೇರವಾಗಿ ಹೇಳಿ, ಆತನ ಬಗ್ಗೆ ನಿಮ್ಮ ಗೆಳತಿಗೆ ಎಲ್ಲವನ್ನೂ ವಿವರಿಸಿ, ಆಕೆ ನಿಮ್ಮ ಕ್ಲೋಸ್ ಫ್ರೆಂಡ್ ನಿಜವೇ ಆಗಿದ್ದಲ್ಲಿ ನಿಮ್ಮ ಮಾತನ್ನು ಕೇಳುತ್ತಾಳೆ, ಇಲ್ಲವೇ ಆಕೆಯನ್ನು ಆಕೆಯ ಪಾಡಿಗೆ ಬಿಡಿ. ನೀವು ಎಚ್ಚರದಿಂದ ಇರಿ.

೧. ಅವನು ಒಳ್ಳೆಯವನಲ್ಲ ಎಂಬುದು ನಿಮಗೆ ತಿಳಿಯಿತು. ಆದ್ದರಿಂದ ನೀವು ಅವನಿಂದ ದೂರ ನಿಲ್ಲುವುದೇ ಲೇಸು.

೨. ಹುಡುಗಿಯರು ಸಲಿಗೆ ತೋರದೆ ಹುಡುಗರು ಧೈರ್ಯ ತೋರುವುದಿಲ್ಲ. ಆದ್ದರಿಂದ ರಫ್ ಆಗಿ ಒಮ್ಮೆ ಮೆಸೇಜ್ ಕಳುಹಿಸಿ. ಇಲ್ಲದಿದ್ದರೆ ಈಗ ಮೊಬೈಲ್ ನಲ್ಲಿ ಬ್ಲಾಕ್ ಮಾಡುವ ಸೌಲಭ್ಯ ಇದೆ. ಅದನ್ನು ಉಪಯೋಗಿಸಿ.

೩. ಅವನು ಕೆಟ್ಟವನು ಎಂದ ಮೇಲೆ ನಿಮ್ಮ ಮೇಲೆ ಕೆಟ್ಟ ಪ್ರಯೋಗ ಬಳಸುತ್ತಿದ್ದಾನೆ. ಆ ಪ್ರಯೋಗದಿಂದ ನಿಮ್ಮನ್ನು ನೀವೇ ಕಾಪಾಡಿಕೊಳ್ಳಬೇಕು.

ಸಾಂದರ್ಭಿಕ ಚಿತ್ರ

೪. ಸಾಧ್ಯವಾದಷ್ಟು ಬೇಗ ನಿಮ್ಮ ರೂಂ ಬದಲಿಸಿದರೆ ಸಮಸ್ಯೆಯಿಂದ ಮುಕ್ತಿ ಪಡೆಯಿರಿ. ಆಕೆ ಏನು ಬೇಕಾದರೂ ಮಾಡಲಿ, ಎಲ್ಲಿ ಬೇಕಾದರೂ ಹೋಗಲಿ, ನಾವು ನಮ್ಮ ಎಚ್ಚರಿಕೆಯಿಂದ ಇದ್ದರೆ ಏನೂ ಆಗದು.

೫. ನೀವು ಹಾಸ್ಟೆಲ್ ನಲ್ಲಿ ಉಳಿದು ಕಲಿಯುತ್ತಿರುವುದು ನಿಮ್ಮ ಕಾಲ ಮೇಲೆ ನಿಂತು ಜೀವನದಲ್ಲಿ ಏನಾದರೂ ಸಾಧಿಸಲಿಕ್ಕೆ ತಾನೇ? – ಹಾಗಾದಲ್ಲಿ ನೀವು ಇಂತಹ ವಿಚಾರಕ್ಕೆ ಸುಮ್ಮನೆ ಮೂಗು ತೂರಿಸುವುದು, ಸಮಸ್ಯೆ ಮೈಗೆಳೆದುಕೊಳ್ಳುವುದು ಬೇಡ.

೬. ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದಿರಿ. ಇಂತಹ ಯುವಕರು ಆಮಿಷ, ಮನಮೋಹಕ, ಭಾವನಾತ್ಮಕ ಮಾತುಗಳನ್ನಾಡುತ್ತಾರೆ. ಅದು ನಾಟಕವೇ ಹೊರತು ಯಾವುದೇ ಸತ್ಯಾಂಶ ಇರುವುದಿಲ್ಲ. ಅಂತವರು ಮುಗ್ದ ಹುಡುಗಿಯ ಬಾಳಲ್ಲಿ ಆಟವಾಡುತ್ತಾರೆ. ಅವರ ಅಕ್ಕ ತಂಗಿಗೆ ಹೀಗೆ ಯಾರಾದರೂ ಮಾಡಿದರೆ ಅವರಿಗೆ ಏನಾಗಬಹುದು ಎಂದು ಯೋಚಿಸುವುದಿಲ್ಲ. ಯಾವುದಕ್ಕೂ ನಾವು ನಮ್ಮ ಎಚ್ಚರಿಕೆಯಿಂದ ಇದ್ದರೆ ಏನೂ ಆಗದು.

Leave a Reply