photo ; flickr

ರಿಯಾದ್: ಕೊನೆಗೂ ಪತ್ರಕರ್ತ ಜಮಾಲ್ ಕಸೋಗಿ ಹತ್ಯೆಯ ಕುರಿತು ಸೌದಿ ಅರೇಬಿಯ ಅಧಿಕೃತ ಪ್ರಕಟಣೆ ನೀಡಿದೆ. ಅವರು ಟರ್ಕಿಯ ಧೂತವಾಸದೊಳಗೆ ನಡೆದ ಘರ್ಷಣೆಯಲ್ಲಿ ಹತ್ಯೆಯಾದರೆಂದು ಸೌದಿ ನಿನ್ನೆ ತಡ ರಾತ್ರೆ ನೀಡಿದ ಪ್ರಕಟನೆಯಲ್ಲಿ ತಿಳಿಸಿತು.

ಸೌದಿಯ ಅಧಿಕೃತ ಸುದ್ದಿ ಸಂಸ್ಥೆ ಹೊರಡಿಸಿದ ಪ್ರಕಟನೆಯಲ್ಲಿ ಇಸ್ತಾಂಬುಲ್‍ನ ಸೌದಿ ಧೂತವಾಸದಲ್ಲಿ ಅಧಿಕಾರಿಗಳೊಂದಿಗೆ ನಡೆದಿದ್ದ ಘರ್ಷಣೆಯಿಂದಾಗಿ ಕಸೋಗಿ ಮೃತಪಟ್ಟಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್‍ರ ಹೇಳಿಕೆಯನ್ನುಉದ್ಧರಿಸಿ ವಿವರ ನೀಡಿದೆ.

ಕಸೋಗಿ ಕೊಲೆಗೆ ಸಂಬಂಧಿಸಿ 18 ಮಂದಿಯನ್ನು ಬಂಧನವಾಗಿದ್ದು ಜನರಲ್ ಇಂಟಲಿಜೆನ್ಸ್ ಮುಖ್ಯಸ್ಥನ ಪದವಿಯಿಂದ ಕರ್ನಲ್ ಅಹ್ಮದ್ ಅಲ್‍ಅಸೀರಿ ಮತ್ತು ರಾಯಲ್ ಕೋರ್ಟು ಸಲಹೆಗಾರ ಸ್ಥಾನದಿಂದ ಸೌದ್ ಅಲ್‍ಕಹ್ತಾನಿಯವರನ್ನು ತೆಗೆದು ಹಾಕಿ ಸರಕಾರ ಅಧಿಕೃತ ಆದೇಶ ಹೊರಡಿಸಿದೆ ಎಂದು ಪ್ರಕಟನೆ ತಿಳಿಸಿದೆ. ಸೌದಿ ಪ್ರಿನ್ಸ್ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್‍ರ ನೇತೃತ್ವದಲ್ಲಿಸಚಿವ ಸಮಿತಿಯನ್ನು ಜನರಲ್ ಇಂಟಲಿಜೆನ್ಸ್ ಪುನರ್‍ರಚನೆಗೆ ರೂಪಿಸಲಾಗಿದೆ. ಅಕ್ಟೋಬರ್ ಎರಡರಂದು ಪತ್ರಕರ್ತ ಜಮಾಲ್ ಖಶೋಗಿ ಕಾಣೆಯಾಗಿದ್ದರು.

Leave a Reply