ಇಂದು ಹಲವರನ್ನು ಮೈಗ್ರೇನ್ ಕಾಡುತ್ತಿದೆ. ತಲೆಯ ಒಂದು ಭಾಗದಲ್ಲಿ ಎಂಬ ಅರ್ಥವಿರುವ `ಮೈಗ್ರೇನ್’ ಎಂಬ ಪದವು ಫ್ರೆಂಚ್ ಭಾಷೆಯದ್ದಾಗಿದೆ. ಶರೀರದ ಆಂತರಿಕ ಹಾಗೂ ಬಾಹ್ಯ ಸಂಘರ್ಷದ ಫಲವಾಗಿ ಮೆದುಳಿನಲ್ಲುಂಟಾಗುವ ಏರು ಪೇರುಗಳಿಂದ ರಕ್ತನಾಳಗಳು ಸಂಕುಚಿತಗೊಂಡು ಮೈಗ್ರೇನ್ ಕಾಣಿಸಿಕೊಳ್ಳುತ್ತದೆ.
ಹೇಗೆ ತಿಳಿದುಕೊಳ್ಳಬಹುದು?

ತಲೆನೋವು ಹಲವು ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಮೈಗ್ರೇನ್ ಸ್ವಭಾವದಲ್ಲಿ ಪ್ರತಿಯೊಬ್ಬರಲ್ಲೂ ವ್ಯತ್ಯಾಸವಿರುತ್ತದೆ. ಹಣೆಯ ಒಂದು ಭಾಗದಲ್ಲಿ ಸ್ವಂದಿಸುವಂತೆ, ರಕ್ತನಾಳಗಳು ಢಿಕ್ಕಿ ಹೊಡೆಯುವಂತಹ ವೇದನೆಯು ಮುಖ್ಯ ಲಕ್ಷಣ. ಇದರೊಂದಿಗೆ ವಾಕರಿಕೆ ಮತ್ತು ವಾಂತಿಯೂ ಕಂಡುಬರುತ್ತದೆ. ಆದರೆ ಕೆಲವೊಮ್ಮೆ ತಲೆಯ ಎರಡೂ ಭಾಗಗಳಲ್ಲಿ ಅಥವಾ ಇಡೀ ತಲೆಯಲ್ಲೇ ನೋವು ಗೋಚರಿಸುವುದಿದೆ. ಒಮ್ಮೆ ತಲೆ ನೋವು ಆರಂಭವಾಯಿತೆಂದರೆ ಅದು ನಾಲ್ಕರಿಂದ 72 ಗಂಟೆಯವರೆಗೂ ಮುಂದು ವರಿದೀತು. ಬೆಳಕು ಅಥವಾ ಶಬ್ದ ಗೋಚರಿಸುವಾಗ ತಲೆನೋವು ಹೆಚ್ಚಾಗುತ್ತದೆ. ದಿನನಿತ್ಯದ ಕೆಲಸ ಮಾಡಲೂ ಸಾಧ್ಯವಾಗುವುದಿಲ್ಲ. ಯಾರೂ ಇಲ್ಲದೆ ಒಂಟಿಯಾಗಿಯೇ ಇರುವ ಬಯಕೆ ಮೂಡುತ್ತದೆ. `ಓರ’ ಎಂಬ ಲಕ್ಷಣವೂ ಕಾಣಿಸಿಕೊಳ್ಳುತ್ತದೆ. ಇದು ಎಲ್ಲರಲ್ಲೂ ಉಂಟಾಗಬೇಕೆಂದಿಲ್ಲ. 20 ನಿ. ದೀರ್ಘವಾಗಿರುವ ಓರವು ಒಬ್ಬೊಬ್ಬರಲ್ಲೂ ಒಂದೊಂದು ರೀತಿಯಲ್ಲಿರುತ್ತದೆ. ಕಣ್ಣಿನ ಮುಂದೆ ತೀವ್ರ ಬೆಳಕು, ಮಿಂಚು, ವಸ್ತುಗಳು ಎರಡಾಗಿ ಗೋಚರಿಸುವುದು. ಮೈಗ್ರೇನ್ ಬರುವ ಸೂಚನೆ ಓರದಿಂದ ಲಭಿಸುತ್ತದೆ.

ಗಮನಿಸಬೇಕಾದ ವಿಷಯಗಳು

ಶಿಸ್ತುಬದ್ಧವಾದ ಜೀವನ ಶೈಲಿಯಿಂದ ಮೈಗ್ರೇನ್ ಬರದಂತೆ ತಡೆಯಬಹುದು. ಆಹಾರ ಸಮಯಕ್ಕೆ ಸರಿಯಾಗಿ ಸೇವಿಸಿ. ಆಹಾರ ಸೇವಿಸುವುದನ್ನೇ ಬಿಡುವುದಕ್ಕಿಂತ ಸ್ವಲ್ಪವಾದರೂ ಸೇವಿಸಿ. ನಿದ್ದೆಯ ಕ್ರಮಬದ್ಧತೆ ಅತಿ ಅಗತ್ಯ. ದಿನಕ್ಕೆ ಏಳೆಂಟು ಗಂಟೆ ಗಟ್ಟಿಯಾಗಿ ನಿದ್ರಿಸಬೇಕು. ನಿದ್ದೆ ಹೆಚ್ಚಾದರೂ, ಕಡಿಮೆಯಾದರೂ ತೊಂದರೆಯೇ. ಪ್ರಯಾಣದಲ್ಲಿರುವಾಗ ಓದುವುದನ್ನು ನಿಲ್ಲಿಸಿ. ರೈಲು ಮತ್ತು ಇತರವುಗಳಲ್ಲಿ ಯಾತ್ರೆ ಮಾಡುವಾಗ ಎದುರು ಭಾಗದಲ್ಲಿ ಕುಳಿತುಕೊಳ್ಳಬೇಡಿ. ನಿಯಮಿತ ವ್ಯಾಯಾಮ ಉಪ ಕಾರಪ್ರದವಾಗಿರುತ್ತದೆ. ಮಾನಸಿಕ ಒತ್ತಡ ಕಡಿಮೆಗೊಳಿಸಲು ಮಕ್ಕಳೊಂದಿಗೆ ಸಮಯ ಕಳೆಯಿರಿ. ವಿನೋದ, ಆಟಗಳಲ್ಲಿ ಸೇರಿ ಕೊಳ್ಳಬಹುದು. ಧೂಮಪಾನ, ಮದ್ಯಪಾನ ದಂತಹ ಕೆಡುಕುಗಳನ್ನು ಖಂಡಿತಾ ತ್ಯಜಿಸ ಬೇಕು. ಅತ್ಯಧಿಕ ಕೆಲಸದ ಹೊರೆಯಿರು ವವರು ವಿಶ್ರಾಂತಿಗಾಗಿ ಸಮಯ ಕಂಡು ಕೊಳ್ಳಿ. ಫಾಸ್ಟ್‍ಫುಡ್ ಮತ್ತು ಅಜಿನ ಮೊಟೋ ಸೇರಿಸಿ ಆಹಾರಗಳನ್ನು ಬಿಟ್ಟು ಬಿಡಿರಿ. ಟಿ.ವಿ.ಯನ್ನು ಸವಿೂಪದಿಂದ ವೀಕ್ಷಿಸಬೇಡಿ. ಮಕ್ಕಳು ನಿರಂತರ ಗಂಟೆ ಗಟ್ಟಲೆ ಟಿ.ವಿ. ನೋಡಬಾರದು. ಅತಿಯಾದ ಬಿಸಿಲಿರುವ ಸಮಯದಲ್ಲಿ ಹ್ಯಾಟೋ ಅಥವಾ ಸನ್‍ಗ್ಲಾಸ್, ಕೊಡೆಯನ್ನೋ ಉಪಯೋಗಿಸಬಹುದು.

ಮೈಗ್ರೇನ್ ತಲೆನೋವಿಗೆ ಹೋಮಿಯೋಪತಿ ಚಿಕಿತ್ಸೆ ಫಲಪ್ರದವಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕಾಣುವ ದೈಹಿಕ, ಮಾನಸಿಕ ಲಕ್ಷಣಗಳನ್ನು ಗುರುತಿಸುವ ವ್ಯಕ್ತಿತ್ವ ಚಿಕಿತ್ಸೆ ಇದಕ್ಕೆ ಸೂಕ್ತ ಪರಿಹಾರ ನೀಡುತ್ತದೆ. ಕುಟುಂಬದ ಸ್ಥಿತಿಗತಿಗಳು ಹಾಗೂ ರೋಗಿಯ ಇಷ್ಟ ಅನಿಷ್ಟಗಳೆಲ್ಲಾ ವ್ಯಕ್ತಿತ್ವ ಚಿಕಿತ್ಸೆಯಲ್ಲಿ ಪರಿಗಣಿಸಲಾಗುತ್ತದೆ.

ಮೈಗ್ರೇನ್ ಉಂಟಾಗುವ ಕಾರಣಗಳು:

ಮೈಗ್ರೇನ್ ಯಾವುದೇ ಒಂದು ನಿರ್ದಿಷ್ಟ ಕಾರಣವೆಂಬುದು ಇಲ್ಲ. 80 ಶೇಕಡಾ ಮಂದಿಯಲ್ಲಿ ವಂಶ ಪಾರಂಪರ್ಯವಾಗಿ ಬರುತ್ತದೆ.

  • ಮಾನಸಿಕ ಒತ್ತಡ
  • ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು.
  • ನಿದ್ದೆಯಲ್ಲಿನ ಏರುಪೇರು
  • ದೀರ್ಘ ಪ್ರಯಾಣ.
  • ಕರ್ಕಶ ಶಬ್ದಗಳು.
  • ಹುಳಿ ಸೇರಿಸಿರುವ ಆಹಾರ
  • ಗರ್ಭನಿರೋಧಕ ಗುಳಿಗೆಗಳು
  • ಕಾಫಿ ಮತ್ತು ಚಾಕೊಲೇಟ್
  • ಮದ್ಯಪಾನ, ಧೂಮಪಾನ
  • ಪರ್‍ಫ್ಯೂಮ್‍ಗಳು
  • ಪ್ರಖರವಾದ ಬೆಳಕು ಇವುಗಳೆಲ್ಲಾ ಮೈಗ್ರೇನ್‍ಗೆ ಕಾರಣವಾಗಬಹುದು.

Leave a Reply