Photo credit : TheNewsMinute

ಕೊಚ್ಚಿ: ಸುಪ್ರೀಂಕೋರ್ಟಿನ ಮಹಿಳಾ ಪ್ರವೇಶದ ತೀರ್ಪಿನ ವಿರುದ್ಧ ಪ್ರತಿಭಟನೆ ಮುಂದುವರಿಯುತ್ತಿದ್ದು, ಇದೇ ವೇಳೆ ಕೇರಳ ಹೈಕೋಟು ಸುಪ್ರೀಂಕೋರ್ಟಿನ ತೀರ್ಪು ದೇಶಕ್ಕೆ ಕಾನೂನು ಎಂದಿದೆ. ಸಿವಿಲ್, ಜ್ಯುಡಿಶಿಯಲ್ ಅಧಿಕಾರಿಗಳ ಸಹಿತ ದೇಶದಲ್ಲಿರುವ ಎಲ್ಲ ಪ್ರಜೆಗಳು ಸುಪ್ರಿಂಕೋರ್ಟಿನ ತೀರ್ಪನ್ನು ಪಾಲಿಸಲು ಬದ್ಧರು.ಇದನ್ನೆ ಸಂವಿಧಾನದ 141, 144 ಪರಿಚ್ಛೇದ ಪ್ರತಿಪಾದಿಸಿದೆ ಎಂದು ಕೇರಳ ಹೈಕೋರ್ಟು ಹೇಳಿದೆ.

ಪಿಡಿಜೋಸೆಫ್ ಎಂಬವರು ಹೈಕೋರ್ಟಿಗೆ ಸಲ್ಲಿಸಿ ಸಾಕಷ್ಟು ಸುರಕ್ಷೆ ಮತ್ತು ಮೂಲಭೂತ ಸೌಕರ್ಯಗಳು ಆಗುವವರೆಗೆ ಶಬರಿಮಲೆಗೆ ಯುವತಿಯರನ್ನು ಹೋಗಲು ಬಿಡಬಾರದು ಎಂದು ಆದೇಶಿಸಬೇಕೆಂದು ಮನವಿ ಮಾಡಿದ್ದರು. ಆದರೆ ಈ ಅರ್ಜಿಯನ್ನು ಚೀಫ್ ಜಸ್ಟಿಸ್ ಹೃಷಿಕೇಶ್ ರಾಯ್ ಮತ್ತು ಜಸ್ಟಿಸ್ ಎಕೆ ನಂಬಿಯಾರ್‍ರಿದ್ದ ವಿಭಾಗೀಯ ಪೀಠ ತಳ್ಳಿಹಾಕಿದೆ.

ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಅಸಹಮತ ಇದ್ದರೆ ಅದನ್ನೇ ಸಂಪರ್ಕಿಸಿರಿ ಎಂದು ಅರ್ಜಿದಾರ ಪಿ.ಡಿ. ಜೋಸೆಫ್‍ರಿಗೆ ಕೋರ್ಟು ಸೂಚಿಸಿದೆ. ಸುರಕ್ಷೆಯ ವ್ಯವಸ್ಥೆ ಆಗದೆ ಅವಸರದಿಂದ ಯುವತಿಯರ ಪ್ರವೇಶಕ್ಕೆ ಅವಕಾಶ ನೀಡಿದ್ದು ಶಬರಿಮಲೆಯಲ್ಲಿನ ಅಹಿತಕರ ಘಟನೆಗಳಿಗೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ಜೋಸೆಫ್ ವಾದಿಸಿದ್ದರು.

Leave a Reply