ಮುಂಬೈ: ಶೀನಾ ಬೊರ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಇಂದ್ರಾಣಿ, ಪೀಟರ್ ಮುಖರ್ಜಿ ಬಾಂದ್ರಾ ಕುಟುಂಬ ಕೋರ್ಟಿನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಸರಿಪಡಿಸಲಾಗದಂತಹ ರೀತಿಯಲ್ಲಿ ತಮ್ಮಿಬ್ಬರನಡುವಿನ ಸಂಬಂಧ ಕೆಟ್ಟುಹೋಗಿದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.

ಇಂದ್ರಾಣಿ ಎಪ್ರಿಲ್‍ನಲ್ಲಿ ಮದುವೆ ವಿಚ್ಛೇದನ ನೋಟಿಸು ಕಳುಹಿಸಿದ್ದರು. ಪೀಟರ್ ಈಗ ಆರ್ಥರ್ ರೋಡ್ ಜೈಲಿನಲ್ಲಿದ್ದರೆ, ಇಂದ್ರಾಣಿ ಬೈಕುಳ ಮಹಿಳಾ ಜೈಲಿನಲ್ಲಿದ್ದಾರೆ.

ಆರೋಗ್ಯ ಕೆಡುತ್ತಿದೆ, ಜೈಲಿನಲ್ಲಿ ತನಗೆ ಬೆದರಿಕೆಯಿದೆ ಎಂದು ಇಂದ್ರಾಣಿಸಲ್ಲಿಸಿದ ಜಾಮೀನು ಅರ್ಜಿಯನ್ನು ಸಿಬಿಐ ಕೋರ್ಟು ತಿರಸ್ಕರಿಸಿತ್ತು. ಎದೆನೋವು ಕಾಣಿಸಿಕೊಂಡದ್ದರಿಂದಕಳೆದ ಜುಲೈಯಲ್ಲಿ ಮುಖರ್ಜಿಯವರನ್ನು ಜೈಲಾಸ್ಪತ್ರೆಗೆ ಸೇರಿಸಲಾಗಿತ್ತು.

Leave a Reply