ಆಗ್ರ: ರಾಜಸ್ತಾನದ ರಾಜಸಮುಂದ್‍ನಲ್ಲಿ ಪಶ್ಚಿಮಬಂಗಾಳದ ಅಫ್ರಾಝುಲ್‍ನನ್ನು ಕೊಡಲಿಯಿಂದ ಕಡಿದು ಕೊಂದು ಸುಟ್ಟು ಹಾಕಿದ ಪ್ರಕರಣದ ಆರೋಪಿ ಶಂಭುಲಾಲ್ 2019ರಲ್ಲಿ ಲೋಕಸಭಾಚುನಾವಣೆಗೆ ಉತ್ತರ ಪ್ರದೇಶದ ನವ ನಿರ್ಮಾಣ ಸೇನೆಯ ಅಭ್ಯರ್ಥಿಯಾಗಿ ಆಗ್ರದಿಂದ ಸ್ಪರ್ಧಿಸಲಿದ್ದಾನೆಂದು ಉತ್ತರ ಪ್ರದೇಶ ನವನಿರ್ಮಾಣ ಸೇನೆ ತಿಳಿಸಿದೆ. ಶಂಭುಲಾಲ್ ನಮ್ಮ ಪ್ರಸ್ತಾವವನ್ನು ಸ್ವೀಕರಿಸಿದ್ದಾನೆಂದು ನವನಿರ್ಮಾಣ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಜಾನಿತಿಳಿಸಿದರು. ಜೋಧಪುರ ಜೈಲಿನಿಂದ ಶಂಭುಲಾಲ್ ಸ್ಪರ್ಧಿಸಲಿದ್ದಾನೆ.

ನಮ್ಮ ಪಾರ್ಟಿ ಹಿಂದುತ್ವ ಮುಖ ಇರುವವರಿಗೆ ಮಾತ್ರ ಸ್ಪರ್ಧಿಸಲು ಟಿಕೆಟು ನೀಡುತ್ತದೆ. ಹೀಗೆ ನೋಡುವಾಗ ಶಂಭೂಲಾಲ್‍ನನ್ನು ಹೊರತುಪಡಿಸಿ ಸೂಕ್ತನಾದ ಇನ್ನೊಬ್ಬ ವ್ಯಕ್ತಿಯಿಲ್ಲ. ಶಂಭುಲಾಲ್ ನಿರಪರಾಧಿಯಾಗಿದ್ದಾನೆ ಎಂದೂ ಅಮಿತ್ ಜಾನಿ ಹೇಳಿದ್ದಾರೆ. ಕಳೆದರಾಮ ನವಮಿಯಂದು ಶಂಭುಲಾ¯ನನ್ನು ಜೋಧಪುರದಲ್ಲಿ ಗೌರವಿಸುವ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿತ್ತು.

20017 ನವೆಂಬರ್ ಆರರಂದು ಅಫ್ರಾಝುಲ್‍ರನ್ನು ಗುಂಡಿಟ್ಟುಕೊಂದುಹಾಕಿದ ಬಳಿಕ ಪೆಟ್ರೋಲ್ ಸುರಿದು ಸುಟ್ಟುಹಾಕಿ ಅದನ್ನು 14 ವರ್ಷದ ಹುಡುಗನಲ್ಲಿ ಮೊಬೈಲ್‍ನಲ್ಲಿ ಚಿತ್ರೀಕರಿಸುವಂತೆ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದನು. ಲವ್‍ಜಿಹಾದ್ ಆರೋಪಿಸಿ ಅಫ್ರಾಝುಲ್‍ರನ್ನು ಕೊಲ್ಲಲಾಗಿದೆ ಎಂದು ಮೊದಲು ವರದಿಯಾಗಿತ್ತು. ಶಂಭುಲಾ ನನ್ನು ಬೆಂಬಲಿಸಿ ಹಲವಾರು ಹಿಂದುತ್ವ ಸಂಘಟನೆಗಳು ರಂಗ ಪ್ರವೇಶಿಸಿದ್ದವು.ಕೇಸು ನಡೆಸಲಿಕ್ಕಾಗಿ ಈತ ಪತ್ನಿಯ ಖಾತೆಗೆ ಹಣ ಸಂಗ್ರಹಿಸಿ ಕೊಡಲಾಗಿತ್ತು.

Leave a Reply