ಮೈಸೂರು: ಕಾಲೇಜಿಗೆ ಸರಿಯಾಗಿ ಬಾರದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಹಿರಿಯ ಕಾನೂನು ವಿದ್ಯಾರ್ಥಿಗಳು ಅರೆಬೆತ್ತಲೆಯಾಗಿ ಪರೀಕ್ಷೆ ಬರೆದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಕಾಲೇಜಿಗೆ ಬಾರದ ಮತ್ತು ಸರ್ಕಾರಿ ನೌಕರರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಕೇರಳದ ವಿದ್ಯಾರ್ಥಿಗಳು ಒಂದು ದಿನವೂ ಕಾಲೇಜಿಗೆ ಬರದಿದ್ದರೂ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಆರೋಪಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ, ಶರ್ಟ್ ತೆಗೆದು ಪರೀಕ್ಷೆ ಬರೆದು ಪ್ರತಿಭಟನೆ ನಡೆಸಿದರು. ನಗರದ ಶಾರದ ವಿಲಾಸ ಕಾಲೇಜಿನಲ್ಲಿ ಶುಕ್ರವಾರ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ವೇಳೆ ಈ ವಿಲಕ್ಷಣ ಘಟನೆ ನಡೆದಿದೆ.
ಪ್ರಾಂಶುಪಾಲೆ ವಿನುತಾ ಮತ್ತು ಕಾಲೇಜು ಅಧ್ಯಕ್ಷ ಪಾರ್ಥಸಾರಥಿ ಅವರು ದಲಿತ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಶೇ. 74 ರಷ್ಟು ಹಾಜರಾತಿ ಇದ್ದವರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂದು ಆರೋಪಿಸಲಾಗಿದೆ.
(ಸಂಭಾವ್ಯ ಚಿತ್ರ)