ರಾಜ್ಯದ ಕೆಲವು ಭಾಗಗಳಲ್ಲಿ ಚುನಾವಣಾ ಅಧಿಕಾರಿಗಳಿಗೆ ಇ.ವಿ.ಎಮ್‌ ಮೆಷಿನ್ ನೀಷೇಧಿಸುವಂತೆ ನಾಗರಿಕರು ಬ್ಯಾನರ್ ಮುಖಾಂತರ ಮನವಿ ಮಾಡಿರುವ ಚಿತ್ರ ಇದೀಗ ವೈರಲ್ ಆಗಿದೆ.

ಉತ್ತರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆಯ ಫಲಿತಾಂಶದ ಬಳಿಕ ಇ.ವಿ‌.ಎಮ್‌ ಮೆಷಿನ್ ದುರ್ಬಳಕೆ ಮಾಡಿರುವುದಾಗಿ ವಿರೋಧ ಪಕ್ಷದವರು ಹಾಗೂ ಮತ್ತಿತರು ಆರೋಪಿಸಿದ್ದರು. ತದನಂತರ ಹಲವು ಬಾರಿ ಪ್ರಯೋಗ ನಡೆಸಲಾಗಿತ್ತು. ಒಂದು ಪಕ್ಷದ ಚಿಹ್ನೆ ಮೇಲೆ ಒತ್ತಿದ ಮತಗಳು ಇನ್ನೊಂದು ಪಕ್ಷಕ್ಕೆ ಬೀಳುತ್ತಿರುವುದಾಗಿ ಆರೋಪಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.‌ ಇದಾದ ಬೆನ್ನಲ್ಲೆ ಈ ರೀತಿಯ ಬ್ಯಾನರ್‌ಗಳು ಅಲ್ಲಲ್ಲಿ ಕಂಡು ಬಂದಿದೆ ಎನ್ನಬಹುದು.

Leave a Reply