ಈ ಬಾರಿ ರಾಮ ಮಂದಿರ ನಿರ್ಮಾಣ ಮಾಡದಿದ್ದರೆ ಜನ ಚಪ್ಪಲಿ ತೆಗೆದು ಹೊಡೀತಾರೆ ಎಂದು ಶಿವ ಸೇನೆ ವಕ್ತಾರ ಸಂಜಯ್ ರಾವತ್ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
2014 ರಲ್ಲಿ ನಾವು ರಾಮನ ಹೆಸರಲ್ಲಿ ಚುನಾವಣೆ ಎದುರಿಸಿದ್ದೇವೆ. ಈ ಬಾರಿಯೂ ರಾಮನ ಹೆಸರಿನಲ್ಲಿ ಚುನಾವಣೆ ಎದುರಿಸಿದ್ದೇವೆ. ಚುನಾವಣೆಗೆ ಮುಂಚೆ ನಾವೆಲ್ಲಾ ಉದ್ಧವ್ ಠಾಕ್ರೆ ಜೊತೆಗೆ ಅಯೋಧ್ಯೆಗೆ ಹೋಗಿದ್ದೆವು. ಯಾಕೆಂದರೆ ನಾವು ಚುನಾವಣೆಯ ಬಳಿಕ ಅಲ್ಲಿಗೆ ಭೇಟಿ ಕೊಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಾವು ನಡೆದು ಕೊಂಡಿದ್ದೇವೆ. ಚುನಾವಣೆಯ ಬಳಿಕ ನಾವು ರಾಮನನ್ನು ಮರೆಯಲ್ಲ. ಈಗ ಬಿಜೆಪಿ ಸರಕಾರಕ್ಕೆ ಸ್ಪಷ್ಟ ಬಹುಮತ ಬಂದಿದೆ. ಈಗ ಬೇರೇನು ಬೇಕಿದೆ? ಒಂದು ವೇಳೆ ಈ ಬಾರಿ ಮಂದಿರ ನಿರ್ಮಾಣದ ಕೆಲಸ ಆಗದಿದ್ದರೆ ದೇಶದ ಜನರು ನಮ್ಮ ಮೇಲೆ ವಿಶ್ವಾಸ ಕಳಕೊಳ್ಳುತ್ತಾರೆ ಮತ್ತು ನಮ್ಮ ವಿರುದ್ಧ ಚಪ್ಪಲಿ ತೆಗೆದು ಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

Leave a Reply