ಯೂಟ್ಯೂಬ್ ವಿಡಿಯೋ ಮಾಡಿ ವಿಡಿಯೋ ಅಪ್ಲೋಡ್ ಮಾಡಿ, ಹಣ ಸಂಪಾದಿಸಿ ಹೆಸರು ಗಳಿಸಿದವರು ತುಂಬಾ ಮಂದಿ ಇದ್ದಾರೆ. ಆದರೆ ಇಲ್ಲೊಬ್ಬ ಯುವಕ ಯೂಟ್ಯೂಬ್ ವಿಡಿಯೋ ಮಾಡಿ ಭಾರೀ ಬೆಲೆ ತೆತ್ತಿದ್ದಾನೆ. 2017 ರ ಜನವರಿಯಲ್ಲಿ ಚಿತ್ರೀಕರಿಸಿದ ವೀಡಿಯೊಗಾಗಿ ದೊಡ್ಡ ಮೊತ್ತದ ದಂಡವನ್ನು ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಕುಚೇಷ್ಟೆಗಾಗಿ ಹಲವು ರೀತಿಯ ವಿಡಿಯೋ ಮಾಡಲಾಗುತ್ತದೆ. ಚೀನಾದ ಕಾಂಗ್ಹುವಾ ರೆನ್, (21), ಮನೆಯಿಲ್ಲದ ಬೀದಿ ಬದಿಯ ನಿರಾಶ್ರಿತ ವ್ಯಕ್ತಿಗೆ ಓರಿಯೋ ಬಿಸ್ಕತ್ ನೀಡಿದ್ದಾನೆ.
ಆ ಬಿಸ್ಕತ್ ನ ಒಳಗಿದ್ದ ಕ್ರೀಮ್ ತೆಗೆದು ಅದಕ್ಕೆ ಹಲ್ಲುಜ್ಜುವ ಟೂತ್ ಪೇಸ್ಟ್ ಮೆತ್ತಿ ತಿನ್ನಲು ಕೊಟ್ಟಿದ್ದಾನೆ. ಇದನ್ನು ತಿಂದ 52 ವರ್ಷದ ನಿರಾಶ್ರಿತ ವ್ಯಕ್ತಿ ಕೂಡಲೇ ವಾಂತಿ ಮಾಡಿದ್ದು, ಈವರೆಗೆ ನನ್ನೊಂದಿಗೆ ಇಷ್ಟೊಂದು ಕೆಟ್ಟದಾಗಿ ಯಾರೂ ವರ್ತಿಸಿಲ್ಲ ಎಂದು ಹೇಳಿದ್ದಾರೆ. ಇದಕ್ಕಾಗಿ ಆತನಿಗೆ 15 ತಿಂಗಳು ಜೈಲು ಮತ್ತು $ 22,300 ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಿದೆ.

Leave a Reply