Image credit : Flickr

ಆನಲೈನ್ ಯುಗವು ಬಹಳಷ್ಟು ಸವಲತ್ತುಗಳನ್ನು ಕೊಟ್ಟಿರುವ ಜೊತೆಗೆ ನಾವು ಹಲವು ವಿಷಯಗಳ ಬಗ್ಗೆ ಅವಲೋಕನ ನಡೆಸಬೇಕು ಎಂದೂ ಕರೆಕೊಡುತ್ತದೆ. ಆನಲೈನ್ ಖರೀದಿಸಬೇಕು. ಆದರೆ ಅದೊಂದು ಚಟವಾಗಿ ಬಿಡಬಾರದು. ಆನ್ಲೈನ್ ಗ್ರಾಹಕರಾಗುವವರು ಈ ಅಂಶಗಳನ್ನು ಗಮನಿಸುವುದು ಒಳ್ಳೆಯದು.

* ನೀವು ಆನ್‍ಲೈನ್ ಮುಖಾಂತರ ತರಿಸುವ ವಸ್ತುಗಳನ್ನು ಅವಲೋಕಿಸಿರಬಹುದು. ಅದನ್ನು ಪ್ಯಾಕ್ ಮಾಡಲು ಬಹಳಷ್ಟು ಪ್ಲಾಸ್ಟಿಕ್ ಹಾಳೆಗಳನ್ನು ಉಪಯೋಗಿಸಿರುತ್ತಾರೆ. ನಾವು ಅದನ್ನು ಕಸ ಎಂದು ಬಿಸಾಡಬಹುದು. ಇದು ಪ್ರಕೃತಿಗೆ ಬಹಳ ಹಾನಿಕಾರಕ.

* ಬಂದ ವಸ್ತುಗಳು ನಾವು ಖರೀದಿಸಿದಂತೆಯೇ ಇರಬೇಕೆಂದಿಲ್ಲ. ಕೆಲವು ವಸ್ತುಗಳು ಹಾನಿಗೊಳಗಾಗಿರುತ್ತದೆ, ತುಂಡಾಗಿರುತ್ತದೆ. ಇವೆಲ್ಲ ಬೇಡದ ಕಿರಿಕಿರಿಗಳು.

image credit : Flickr

* ಮೋಸ ಹೋಗುವ ಸಂಭವನೀಯತೆ ಅತೀ ಹೆಚ್ಚು. ಬೋಗಸ್ ವೆಬ್‍ಸೈಟ್‍ಗಳು, ನಾವು ಗುರುತಿಸಿದ್ದ ಸಾಮಾನಿನ ಬದಲಿಗೆ ಬೇರೆಯೇ ಬಂದು ತಲುಪುವುದು,ಕ್ರೆಡಿಟ್ ಕಾರ್ಡ್‍ಗಳ ಮೋಸ, ಇನ್ನೂ ಹಲವು ರೀತಿಯ ಮೋಸಗಳು ನಡೆಯುತ್ತವೆ.

* ಆನ್‍ಲೈನ್ ಶಾಪಿಂಗ್‍ನಲ್ಲಿ ಖರೀದಿ ಮಾಡಬೇಕಾದರೆ, ಇಡೀ ದಿನ ಅದಕ್ಕಾಗಿಯೇ ವ್ಯಯಿಸಬೇಕಾಗುತ್ತದೆ. ಸೈಝ್, ಬಣ್ಣ, ವಿಮರ್ಶೆ ಎಲ್ಲವನ್ನೂ ಓದಿ ಬೇಕಾದುದನ್ನು ಆರಿಸಲು ಬಹಳ ಸಮಯವೇ ಹಿಡಿಯುತ್ತದೆ.  

* ಈ ರೀತಿಯ ಶಾಪಿಂಗ್‍ನಿಂದ ಸಮಾಜದೊಂದಿಗೆ ಬೆರೆಯುವ ಯಾವುದೇ ಅವಕಾಶವಿರುವುದಿಲ್ಲ. ಎಲ್ಲ ಸಂಬಂಧಗಳೂ ಕಡಿದು ಹೋಗಬಹುದು.

* ಯಾವ ವಸ್ತು ಬಂದು ತಲುಪುವುದು ಅದು ಯಾವ ರೀತಿ ಇರಬಹುದು ಎಂಬ ಖಾತ್ರಿಯೇ ಇರುವುದಿಲ್ಲ.

* ಹಿಂತಿರುಗಿಸುವಿಕೆಯ ಪ್ರಕ್ರಿಯೆ ಬಹಳ ಜಟಿಲವಾಗಿರುತ್ತದೆ. ಸಾಮಾನ್ಯರಿಗೆಇದು ಅಸಾಧ್ಯದ ಮಾತು.

* ಒಮ್ಮೆ ಇದಕ್ಕೆ ಅಡಿಕ್ಟ್ ಆದರೆ ಅಗತ್ಯ ಇಲ್ಲದ ವಸ್ತುಗಳನ್ನು ಖರೀದಿಸಲು ಮನಸ್ಸಾಗುತ್ತದೆ. ಗ್ರಾಹಕ ಸಂಸ್ಕೃತಿಗೆ ಮಾರು ಹೋಗುತ್ತೇವೆ.

Leave a Reply