ಸಾಂದರ್ಭಿಕ ಚಿತ್ರ

ಪ್ರಮುಖ ಆನ್ಲೈನ್ ವೀಡಿಯೋ ತಾಣವಾದ ನೆಟ್ ಫ್ಲಿಕ್ಸ್ ನ್ನು ಅತೀ ಹೆಚ್ಚು ಕಾಲ ಉಪಯೋಗಿಸಿದ್ದರಿಂದ ಮಾನಸಿಕ ಸ್ಥಿಮಿತ ಕಳಕೊಂಡ ಯುವಕನೋರ್ವನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ನೆಟ್ ಫ್ಲಿಕ್ಸ್ ನೋಡುತ್ತಾ ಪ್ರತೀ ದಿನ ಏಳು ಗಂಟೆ ವ್ಯಯಿಸುತ್ತಿದ್ದ. ನಿರುದ್ಯೋಗಿಯಾಗಿದ್ದ ಈತನನ್ನು ಉದ್ಯೋಗ ಅರಸಲು ಮನೆಯವರು ಈತನ ಮೇಲೆ ಒತ್ತಡ ಹೇರಿದ್ದರು. ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈತ ನೆಟ್ ಫ್ಲಿಕ್ಸ್ ನ ಮೊರೆ ಹೋಗಿದ್ದ ಎಂದು ನಿಮ್ಹಾನ್ಸ್ ಮಾನಸಿಕ ತಜ್ಞರಾದ ಮನೋಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಆಯಾಸ, ಕಣ್ಣಿಗೆ ತೀವ್ರ ದಣಿವು ನಿದ್ದೆಗೆಡುವಿಕೆ ಮುಂತಾದ ಅಸ್ವಾಸ್ಥ್ಯಗಳು ಯುವಕನನ್ನು ಕಾಡಿದ್ದುವು. ಈ ನೆಟ್ ಫ್ಲಿಕ್ಸ್ ಪಿಡುಗಿಗೆ ಹೆಚ್ಚು ಶಾಲಾ ವಿದ್ಯಾರ್ಥಿಗಳು ಬಲಿಯಾಗುತ್ತಾರೆಂದು ತಜ್ಞರ ಅನಿಸಿಕೆ. ಟಿ.ವಿ. ಕಾರ್ಯಕ್ರಮಕ್ಕಿಂತ ಭಿನ್ನವಾಗಿ ಇದರಲ್ಲಿ ಎಪಿಸೋಡ್‍ಗಳನ್ನು ಒಂದಾಗಿ ಕಾಣಬಹುದೆಂಬುದು ಇದರ ಆಕರ್ಷಣೆಯಾಗಿದೆ.

ಅನಿಯಂತ್ರಿತವಾಗಿ ಇಂತಹ ವೀಡಿಯೋಗಳನ್ನು ನೋಡಿ ಸಮಯ ವ್ಯಯಿಸುವುದರಿಂದ ಯುವಜನಾಂಗದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಯೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Leave a Reply