1. ಹಣ್ಣುಗಳು, ನಾರಿನಂಶವಿರುವ ಪದಾರ್ಥಗಳು ಹಾಗೂ ತರಕಾರಿಗಳು ಕೊಲೆಸ್ಟ್ರಾಲ್ ನ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

2. ಒಬೆಸಿಟಿ ಹೆಚ್ಚಾದರೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಒಬೆಸಿಟಿಗೆ ಕೊಬ್ಬಿನಂಶವಿರುವ ಪದಾರ್ಥಗಳು ಕಾರಣವಾಗಿದೆ. ತರಕಾರಿಗಳಿಗೆ ಹೋಲಿಕೆ ಮಾಡಿದರೆ ಮಾಂಸಾಹಾರದಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ, ಅಲ್ಲದೆ ನಾರಿನಂಶವಿರುವ ತರಕಾರಿಗಳು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರದಲ್ಲಿಡಲು ಸಹಕಾರಿಯಾಗಿದೆ.

3. ತರಕಾರಿಯಲ್ಲಿ antioxidants ಅಂಶವಿರುವುದರಿಂದ ತ್ವಚೆಯಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಿ, ತ್ವಚೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ನೀರಿನಂಶವಿರುವ ಹಣ್ಣುಗಳು ತ್ವಚೆ ಸೌಂದರ್ಯಕ್ಕೆ ತುಂಬಾ ಒಳ್ಳೆಯದು.

4. ಹಣ್ಣು, ತರಕಾರಿಗಳಲ್ಲಿ ಹಾರ್ಮೋನ್ ಗಳನ್ನು ಚುಚ್ಚುವುದಿಲ್ಲ, ಆದರೆ ಕೆಲವು ಪ್ರಾಣಿಗಳಿಗೆ ಬೇಗನೆ ಬೆಳೆಯಲು ಹಾರ್ಮೋನ್ ಗಳನ್ನು ಇಂಜೆಕ್ಟ್ ಮಾಡಲಾಗುವುದು. ಆದ್ದರಿಂದ ಹಾರ್ಮೋನ್ ಫ್ರೀ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು.

5. ತರಕಾರಿಗಳನ್ನು ತಿಂದರೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯಲು ಸಹಾಯ ಮಾಡಿ ರಕ್ತದೊತ್ತಡ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

6. ತರಕಾರಿಗಳಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ.

7. ತರಕಾರಿಗಳಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅಮೈನೊ ಅಂಶ ಅಧಿಕವಿರುತ್ತದೆ.

8. ತರಕಾರಿಯಲ್ಲಿ ಕೊಬ್ಬಿನಂಶ ಕಡಿಮೆ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು.

9. ತರಕಾರಿ, ಹಣ್ಣುಗಳು ಇವುಗಳಿಂದ ಸೂಪ್, ಸಲಾಡ್ ಇಂತಹ ಪದಾರ್ಥಗಳನ್ನು ಮಾಡಿ ಸೇವಿಸುವುದರಿಂದ ಬೊಜ್ಜು ಬರುವ ಸಾಧ್ಯತೆ ಕಡಿಮೆಯಾಗುವುದು.

10. ಮಾಂಸಾಹಾರಕ್ಕೆ ಹೋಲಿಸಿದರೆ ತರಕಾರಿ ಬೆಲೆ ಕೂಡ ಕಡಿಮೆ.

Leave a Reply