Representational Image

ನನ್ನ ಸಹೋದರಿಯ ಬದುಕಿ ನಲ್ಲಿ ನಡೆದಿರುವ ವಿಷಯವನ್ನುನಾನು ಇಲ್ಲಿ ಬರೆಯಲುಹೊರಟಿರುವುದು. ನಮ್ಮದು ಮಧ್ಯಮ ವರ್ಗದ ಕುಟುಂಬ. ಐದು ಜನ ಮಕ್ಕಳಲ್ಲಿ ನನ್ನ ತಂಗಿ ಕೊನೆಯವಳು. ಅವಳನ್ನು ನಮ್ಮದೇ ದೂರದ ಸಂಬಂಧಿಕರ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದು. ಒಂದು ಮಗು ಕೂಡಾ ಇದೆ.

ಆಕೆಯ ಗಂಡನ ಆಪ್ತ ಸ್ನೇಹಿತನೋರ್ವ ಆಗಾಗ ಮನೆಗೆ ಬಂದು ಹೋಗ್ತಾ ಇದ್ದಾಗ ಇಬ್ಬರ ನಡುವೆ ಸಲಿಗೆ ಬೆಳೆಯಿತು. ಸಲಿಗೆ ಪ್ರೀತಿಯ ದಾರಿ ಹಿಡಿಯಿತು. ಅವನು ಇವಳಿಗೆ ನಿನ್ನ ಪತಿಯಿಂದ ತಲಾಕ್ ಪಡೆದು ಅವನನ್ನೇ ಮದುವೆ ಆಗಲು ಒತ್ತಾಯಿಸುತ್ತಿದ್ದ. ಒಂದು ದಿನ ಮನೆಯಲ್ಲಿ ಆಕೆ ಒಂಟಿ ಆಗಿದ್ದಾಗ ಮನೆಗೆ ಬಂದ ಅವನು ಅವಳಿಗೆ ತಿಳಿಯದಂತೆ ಜ್ಯೂಸ್‍ಗೆ ಅಮಲು ಬೆರೆಸಿದ್ದು ಆಕೆ ಅದನ್ನು ಕುಡಿದು ಅಮಲಿಗೆ ಜಾರಿದಾಗ ಆಕೆಯನ್ನು ನಗ್ನಗೊಳಿಸಿ ವೀಡಿಯೋ ಚಿತ್ರೀಕರಣ ಮಾಡಿದ.

Representational Image

ವೀಡಿಯೋ ಮಾಡಿದ ವಿಷಯ ಅವಳಿಗೆ ತಿಳಿದಿರಲಿಲ್ಲ. ಇವರಿಬ್ಬರ ನಡುವೆ ಹೆಚ್ಚು ಸಲಿಗೆ ಇದೆ ಎಂದು ಪತಿಗೆ ತಿಳಿದಾಗ ಮನೆಯಲ್ಲಿ ಜಗಳ ನಡೆಯಿತು.ಅವಳು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿ, ಕಣ್ಣೀರು ಹಾಕಿ ಪತಿಯ ಮುಂದೆಇನ್ನು ಮುಂದೆ ಇಂತಹ ತಪ್ಪು ಮಾಡಲಾರೆನೆಂದು ಕೇಳಿ ಕೊಂಡ ನಂತರ ಅವನು ಆಕೆಯನ್ನು ಕ್ಷಮಿಸಿದ. ಪತಿಯ ಮಿತ್ರ ಆಗಾಗ ಇವಳಿಗೆ ಉಪದ್ರವ ಕೊಡಲು ಶುರು ಮಾಡಿದ. ಆಕೆಯನ್ನು ಒಂಟಿಯಾಗಿ ಸಿಗಬೇಕೆಂದು ಬೆದರಿಸ ತೊಡಗಿದ.

ಆಕೆ ನಿರಾಕರಿಸಿದಾಗ ತನ್ನ ಬಳಿವೀಡಿಯೋ ಇದೆ. ಅದನ್ನು ತಾನು ಪತಿಗೆ ಕಳುಹಿಸುವುದಾಗಿ ಬ್ಲಾಕ್‍ಮೇಲ್ ಮಾಡಿದ. ಆಕೆ ಆತನ ಬೆದರಿಕೆಯನ್ನು `ಸುಳ್ಳು’ಎಂದು ನಿರ್ಲಕ್ಷ್ಯ ಮಾಡಿದ್ದಳು .ತಮ್ಮಿಬ್ಬರ ನಡುವೆ ಅನೈತಿಕವಾಗಿ ಏನೂ ನಡೆದಿಲ್ಲದಿರುವಾಗ ತಾನು ಹೆದರುವ ಅಗತ್ಯವಿಲ್ಲವೆಂದು ಅವಳು ಧೈರ್ಯವಾಗಿದ್ದಳು. ಆದ್ರೆ ಒಂದು ದಿನ ಪತಿಯು ಬೆಂಕಿ ಚೆಂಡಿನಂತೆ ಮನೆಗೆ ಧಾವಿಸಿ ಬಂದು ಅವಳನ್ನು ಹಿಡಿದು ಕೆಟ್ಟದಾಗಿ ಬೈಯುತ್ತಾ ಥಳಿಸಿದಾಗ ಅವಳು ಬೆಚ್ಚಿದಳು. ಆತನೊಂದಿಗೆ ಅವನ ಮನೆಯವರೂ ಅವಳನ್ನು ಬಾಸುಂಡೆ ಬರುವಂತೆ ಹೊಡೆದರು.ನನ್ನ ತಂಗಿಯ ತಪ್ಪೇನೆಂದುನಾನು ಪ್ರಶ್ನಿಸಿದಾಗ ನನಗೆವೀಡಿಯೋ ತೋರಿಸಲಾಯಿತು.

ನಾನೂ ದಿಗ್ಭ್ರಮೆಯಿಂದ ಅದನ್ನು ವೀಕ್ಷಿಸಿದೆ. ತಂಗಿ ಅಳುತ್ತಾ ಹೇಳಿದಳು. ನಾನು ಇಂತಹ ಕೆಟ್ಟ ಕೆಲಸ ಮಾಡಿಲ್ಲ… ನನಗೆ ತಿಳಿದಿಲ್ಲ ಇದರ ಬಗ್ಗೆ! ಎಂದಾಗ ಯಾರೂ ನಂಬುವುದೇ ಕಷ್ಟವಾಯಿತು. ಈ ವೀಡಿಯೋ ಅವನಿಗೆ ಅವನ(ತಂಗಿಯ ಗಂಡನ) ಬಾವಕಳಿಸಿದ್ದು, ಆತನಿಗೆ ಈ ಖದೀಮ ಮಿತ್ರ ಪೋಸ್ಟ್ ಮಾಡಿದ್ದ ಎಂದು ತಿಳಿಯಿತು. ಆದಾಗಲೇ ಅಶ್ಲೀಲ ವೀಡಿಯೋ ಕುಟುಂಬ ಇಡೀ ಪ್ರಸಾರ ಆಗಿದೆ ಎಂದು ತಿಳಿದಾಗ ನಾವು ಭೂಮಿಗಿಳಿದು ಹೋದೆವು. ಮುಂದೇನು ಮಾಡುವುದು ಎಂದು ತಿಳಿಯದೇ ಮಾನ, ಮರ್ಯಾದೆ ಮಣ್ಣು ಪಾಲಾದ ಕುರಿತು ದಿಕ್ಕೆಟ್ಟು ಕುಳಿತಾಗ ಸಮಾಜ ಸೇವಕಿ ಓರ್ವರ ನೆನಪಾಯಿತು.

ಅವರು ಕೌಟುಂಬಿಕ ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ.ಅವರು ದೂರದಲ್ಲಿದ್ದರಿಂದ ವಿಷಯವನ್ನು ಫೋನ್ ಮೂಲಕ ತಿಳಿಸಿ ಮುಂದೇನು ಮಾಡುವುದೆಂದು ಕೇಳಿದೆವು. ಅವರು ಇದು ಸೈಬರ್ ಕ್ರಿಮಿನಲ್ ಕೇಸ್…ಆದ್ದರಿಂದ ಈಗಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಸೂಚಿಸಿದರು. ಯಾರ ಮೇಲೆ ದೂರು ಕೊಡುವುದು…?

ಎಂದು ತಂಗಿ ಕೇಳಿದಳು. ನನ್ನ ಪತಿಯ ತಪ್ಪು ಇದರಲ್ಲಿ ಏನೂ ಇಲ್ಲ.ಅವರು ನನ್ನನ್ನು ಕ್ಷಮಿಸಿ ಜೊತೆಗೆ ಕರೆದುಕೊಂಡು ಮನೆಗೆ ಬಂದಿದ್ದರು. ನನ್ನ ಸಂಸಾರ ಛಿದ್ರಮಾಡಲು ಮಾಜಿ ಪ್ರಿಯಕರ ತಂತ್ರ ಮಾಡಿದ್ದು ಎಂದಳು. ಕೌನ್ಸಿಲರ್ ಮಹಿಳೆ ತಂಗಿಗೆ ಹೇಳಿದರು, “ನೀನು ನಿನ್ನ ಪ್ರಿಯಕರನಾಗಿದ್ದ ವಂಚಕನ ಮೇಲೆ ದೂರು ನೀಡಬೇಕು. ಅವನು ನಿನ್ನನ್ನು ಅಮಲು ಬರಿಸಿ ಅತ್ಯಾಚಾರ ಮಾಡಿರುವುದಾಗಿ,ವೀಡಿಯೋ ಮಾಡಿರುವುದಾಗಿ ತಿಳಿಸಬೇಕು, ಅವನಿಗೆ ಶಿಕ್ಷೆ ಮುಖ್ಯ ಎಂದರು. ಅದರಂತೆನಾವು ನಮ್ಮೂರಿನ ಠಾಣೆಗೆ ತೆರಳಿ ಎಲ್ಲಾ ವಿಷಯವನ್ನು ತಿಳಿಸಿ ಆವಂಚಕನ ಮೇಲೆ ಎಫ್.ಐ.ಆರ್.ದಾಖಲಿಸಿದೆವು. ಆವಾಗಲೇ ಕೌನ್ಸಿಲರ್ ಮಹಿಳೆಯೂ ಎಸ್.ಐ.ರೊಡನೆ ಫೋನ್ ಮೂಲಕ ಮಾತನಾಡಿ ಶಿಕ್ಷೆ ಆಗಲೇಬೇಕೆಂದು ತಿಳಿಸಿದರು. ರಾತ್ರಿ ಆತನನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿ ಅರೆನಗ್ನ ಮಾಡಿ ಕುಳ್ಳಿರಿಸಿದರು.

ತಂಗಿಯ ಗಂಡ ಮತ್ತು ಪರಿವಾರದವರನ್ನೆಲ್ಲಾ ಠಾಣೆಗೆ ಕರೆದು ಅವರ ಮೊಬೈಲ್‍ನಲ್ಲಿ ಸೇವ್ ಆಗಿದ್ದ ಅಶ್ಲೀಲ ವೀಡಿಯೋವನ್ನು ಡಿಲೀಟ್ ಮಾಡಿಸಲಾಯಿತು.ತಂಗಿಯ ಮೈಮೇಲೆ ಆಗಿರುವಗಾಯ(ಥಳಿಸಿದ್ದು)ದ ಕುರಿತು ಆಕೆ ಪತಿಯ ವಿರುದ್ಧ ದೂರುನೀಡಲು ಅವಕಾಶ ಇದ್ದರೂ ತಂಗಿಯು ದೂರು ದಾಖಲಿಸಲಿಲ್ಲ.ನನ್ನ ಪತಿಯ ತಪ್ಪೇನೂ ಇಲ್ಲ.ತಪ್ಪು ನನ್ನದೇ ಎಂದು ಮೌನವಾಗಿದ್ದಳು.

ಆದ್ರೆ… ಆ ಸಮಯಕ್ಕೆ ತಾಳ್ಮೆ ಕಳೆದುಕೊಂಡು ಕೋಪಗೊಂಡಿದ್ದ ಆಕೆಯ ಪತಿಯು ಮೂರು ತಲಾಕನ್ನು ಉಸುರಿಅಲ್ಲಿಂದ ಹೊರಟು ಹೋದ. ತಂಗಿಯು ಮಾನಸಿಕವಾಗಿ, ದೈಹಿಕ ವಾಗಿ ನೊಂದು ಕಣ್ಣೀರು ಹಾಕುತ್ತಾ ಕುಳಿತಳು. ಪತಿಯಿಂದ ತನ್ನನ್ನು ಬೇರ್ಪಡಿಸಲು ಪ್ರಿಯಕರಮಾಡಿದ ಸಂಚು ಕೊನೆಗೂ ಸಫಲವಾಯಿತು ಎಂದು ರೋದಿಸಿದಳು.

ನನ್ನ ತಂಗಿಯಂದಿರೇ, ನೀವು ನಿಮ್ಮ ಬದುಕಿನಲ್ಲಿ ಈ ರೀತಿ ಎಡವಿಬೀಳದಿರಿ. ನಿಮ್ಮ ಪತಿಯ ಜೊತೆಸುಂದರ ದಾಂಪತ್ಯದ ಬದುಕು
ಮಾಡಿ. ಈ ಮಾಯಾವಿ ನಯವಂಚಕ ಪುರುಷರಿಗೆ ಮದುವೆಆಗಿರುವ ಹೆಣ್ಣು ಮಕ್ಕಳ ಜೀವನದಲ್ಲಿ `ವಿಷ’ ಬೆರೆಸುವ ತಂತ್ರಗಾರಿಕೆತಿಳಿದಿದೆ. ಪ್ರವಾದಿಯವರು(ಸ) ಹೇಳಿರುವಂತೇ ಪರಪುರುಷರೊಡನೆಸವಿ ಮಾತನಾಡಲು ಹೋಗಬಾರದು. ಸಲಿಗೆಯು ಮುಂದಿನದಿನದಲ್ಲಿ ನಿಮ್ಮ ಎಲ್ಲಾ ಖುಶಿಯನ್ನು ನಾಶ ಮಾಡಿ ಬಿಡಬಹುದು. ಮನೆ ಒಳಗೆ ಇಂತಹಶೈತಾನರನ್ನು `ಮಿತ್ರ’ರೆಂದು ಕರೆದುತರುವ ಪತಿಯಂದಿರು ಕುರುಡರಂತೆ ವರ್ತಿಸಬಾರದು. ಮಿತ್ರನ ಮನಸ್ಸಲ್ಲಿ ಏನಿದೆ ಎಂದು ಅಮಾಯಕ ಪತಿಗೂ ತಿಳಿಯದು. ಸ್ನೇಹ, ಸಲಿಗೆಯನ್ನು ಮನೆಯಿಂದಹೊರಗೇ ಇಡಿ. ಮೊಬೈಲ್ಎಂಬುದು ಅತ್ಯಂತ ದೊಡ್ಡ ಶೈತಾನ್.

ಪತ್ನಿಯರನ್ನು ಸಂಶಯಿಸುವಂತಹ ಕೆಟ್ಟ ಮನಸ್ಸು ಕೂಡಾ ಸರಿಯಲ್ಲ. ದಾರಿ ಮಾಡಿಕೊಟ್ಟ ನಂತರ ದುಃಖಿಸಬೇಡಿ. ಸ್ವಚ್ಚಂದವಾಗಿರುವ ಮನೆಯ ಒಳಾಂಗಣದಲ್ಲಿ ಸ್ತ್ರೀಯರನ್ನು ಕಣ್ಣು ತುಂಬಾ ಹೀರಿಕೊಳ್ಳುವ `ದುಂಬಿ’ಗಳಿಗೆ ಮನೆಯ ಒಳಗೆ ಹಾರಾಡಲು ಆಸ್ಪದ ನೀಡದಿರಿ. ಮಿತ್ರ ಎಷ್ಟೇ ಆಪ್ತನಾಗಿದ್ದರೂ ಸರಿ. ಚಂಚಲ ಮನಸ್ಸಿನ ಹೆಣ್ಣು ಮಕ್ಕಳನ್ನು  ಬುಟ್ಟಿಗೆ ಹಾಕುವ ತಂತ್ರಗಾರಿಕೆ ನಯವಂಚಕರಿಗೆ ಚೆನ್ನಾಗಿ ಗೊತ್ತು. ಜಾಗೃತರಾಗಿರಿ.

-ನೊಂದ ಸಹೋದರಿ

Leave a Reply