ಕೊಪ್ಪಳ: ತನ್ನ ಪತಿಯನ್ನು ಕಳೆದುಕೊಂಡು ದುಃಖದ ನಡುವೆಯೂ ಮತದಾನ ಮಾಡುವ ಮೂಲಕ ಧೀಮಂತ ಮಹಿಳೆ ಎಂಬ ಕೀರ್ತಿಗೆ ಜಿಲ್ಲೆಯ ಮಹಿಳೆ ಪಾತ್ರವಾಗಿದ್ದಾಳೆ.
ನಗರದ ಹೊರವಲಯದಲ್ಲಿರುವ ಗಾಂಧಿನಗರ ನಿವಾಸಿ ಗಂಗವ್ವ ಹನುಮಂತಪ್ಪ ಸಿಗ್ಲಿ ಎಂಬಾಕೆಯೇ ಸಾವಿನ ಸೂತಕದಲ್ಲೂ ಕಣ್ಣೀರು ಒರೆಸಿಕೊಳ್ಳುತ್ತಾ ಮತದಾನ ಮಾಡುವ ಮಾಡಿದ ಮಹಿಳೆ. ಮಂಗಳವಾರ ಮನೆಯಲ್ಲಿ ಪ್ರತಿ ಹನುಮಂತಪ್ಪ ಸಿಗ್ಲಿ (55) ಅವರು ಅಕಾಲಿಕವಾಗಿ ಮರಣ ಹೊಂದಿದ್ದಾರೆ.

ಇಡೀ ಕುಟುಂಬವೇ ದುಃಖದಲ್ಲಿದೆ. ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಪತಿಯ ಶವಸಂಸ್ಕಾರ ಕಾರ್ಯದಲ್ಲಿ ಗಂಗವ್ವ ಭಾಗಿಯಾಗಿದ್ದಾಳೆ. ಪತಿಯ ಶವಕ್ಕೆ ಬೆಂಕಿಯಿಟ್ಟ ಅರ್ಧ ಗಂಟೆಯೊಳಗೆ ನಗರದ ಗಾಂಧಿನಗರದ ಪ್ರಾಥಮಿಕ ಶಾಲೆಯ 141 ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ಮಹಿಳೆ ಗಂಗವ್ವ ಮತದಾನ ಮಾಡಿದರು. ತೀವ್ರ ದುಃಖದ ನಡುವೆಯೂ ತನ್ನ ಪರಮಾಧಿಕಾರ ಚಲಾಯಿಸಿ ಪ್ರಜಾಪ್ರಭುತ್ವಕ್ಕೆ ಸಾಥ್ ನೀಡಿದ ಈ ಮಹಿಳೆ ಮತದಾನದಿಂದ ತಪ್ಪಿಸಿಕೊಳ್ಳಲು ಹಲವು ಹತ್ತು ಕಾರಣಗಳನ್ನು ಹೇಳುವವರಿಗೆ ಮಾದರಿಯಾಗಿದ್ದಾಳೆ.

Leave a Reply