Representational image

ಬೇಕಾಗುವ ಸಾಮಗ್ರಿಗಳು:

4 – ಬ್ರೆಡ್ (ಬ್ರೌನ್ ಬ್ರೆಡ್ ಕೂಡ ಆಗಬಹುದು),
1 ನೀರುಳ್ಳಿ ಸಪೂರ ಕತ್ತರಿಸಿದ್ದು,
1 ಟೊಮೇಟೊ ಸಪೂರ ಕತ್ತರಿಸಿದ್ದು,  1/2 ಕಪ್ ದೊಣ್ಣೆ ಮೆಣಸು,
1/2 ಕಪ್ ಫ್ರೋಜನ್ ಕಾರ್ನ್ / ಫ್ರೆಶ್ ಕಾರ್ನ್ / ಆಲಿವ್ / ಮಶ್ರೂಮ್,
2 ಟೀ.ಸ್ಪೂ. ಬೆಣ್ಣೆ,  1/2 ಕಪ್ ತುರಿದ ಮೊಝರೆಲ್ಲ ಚೀಝ್,
2 ಟೀ.ಸ್ಪೂ. – ಪಿಝ್ಝಾ ಸಾಸ್ (ಐಚ್ಛಿಕ),
1 ಟೀ.ಸ್ಪೂ. – ಕರಿಮೆಣಸಿನ ಹುಡಿ,
1 ಟೀ.ಸ್ಪೂ. – ಚಿಲ್ಲಿ ಫ್ಲೇರ್ (ಕುಟ್ಟಿದ ಕೆಂಪು ಮೆಣಸು),
1 ಟೀ.ಸ್ಪೂ. – ಓರಿಗೇನೊ.

ಮಾಡುವ ವಿಧಾನ:

ಬ್ರೆಡ್‍ನ ಒಂದು ಕಡೆ ಬೆಣ್ಣೆ ಹಚ್ಚಿ, ಬ್ರೆಡನ್ನು ತಣ್ಣಗಿನ
ತವಾದ ಮೇಲೆ ಇಡಿ. ಅದರ ಮೇಲೆ ಸ್ವಲ್ಪ ನೀರುಳ್ಳಿ
ಹರಡಿ, ತುರಿದ ಚೀಝ್, ಟೊಮೇಟೊ, ದೊಣ್ಣೆ
ಮೆಣಸು ಮತ್ತು ಕಾರ್ನ್ ಇಡಿ. ಅದರ ಮೇಲೆ
ಕರಿಮೆಣಸಿನ ಹುಡಿ, ಚಿಲ್ಲಿ ಫ್ಲೇಕ್, ಓರಿಗೇನೊ ಮತ್ತು
ಉಪ್ಪು ಸಿಂಪಡಿಸಿ. ಇನ್ನೊಂದು ತುಂಡು ಬ್ರೆಡ್‍ಗೆ
ಪಿಝ್ಝಾ ಸಾಸ್ ಸವರಿ ಈ ಮಿಶ್ರಣದ ಮೇಲೆ ಇಡಿ.
ಬ್ರೆಡ್ಡಿನ ಮೇಲಿನ ಭಾಗಕ್ಕೆ ಬೆಣ್ಣೆ ಸವರಿ. ಕಾವಲಿ ಬಿಸಿ
ಮಾಡಿ ಸ್ಯಾಂಡ್‍ವಿಚನ್ನು ಮುಚ್ಚಿ 2 ಕಡೆಗಳಲ್ಲೂ
ಕಂದು ಬಣ್ಣ ಬಿಡುವ ತನಕ ಕಾಯಿಸಿ.

Leave a Reply