ಭೋಪಾಲ್: 2014 ರ ಲೋಕ ಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಬರುತ್ತದೆ ಎಂದು ಭರವಸೆ ನೀಡಿದ್ದರು. 2019 ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅದನ್ನು ಹಲವು ಕಡೆ ಉಲ್ಲೇಖಿಸಿ ಚುನಾವಣಾ ಪ್ರಚಾರ ಮಾಡಿದೆ. ಇದೀಗ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ರವರು ಸಾರ್ವಜನಿಕ ಸಭೆಯಲ್ಲಿ 15 ಲಕ್ಷ ರೂ. ಯಾರಿಗಾದರೂ ಬಂದಿದೆಯಾ ಎಂದು ಕೇಳಿದಾಗ ಯುವಕನೊಬ್ಬ ತನಗೆ ಬಂದಿದೆ ಎಂದು ಹೇಳಿದಾಗ ಕಾಂಗ್ರೆಸ್ ಹಿರಿಯ ನಾಯಕ ಆಶ್ಚರ್ಯಚಕಿತರಾದರು. ಆ ಬಗ್ಗೆ ಜನರಿಗೆ ತಿಳಿಸು ಎಂದಾಗ ಆತ ಬೇರೆಯೇ ಮಾತನಾಡಿದ್ದಾನೆ. ಪ್ರಧಾನಿ ಮೋದಿ ಉಗ್ರರ ವಿರುದ್ಧ ಏರ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಉಗ್ರರನ್ನು ನಾಶಮಾಡಿ 15 ಲಕ್ಷ ರೂ. ಹಾಕಿದ್ದಾರೆ ಎಂದು ಭಾಷಣ ಮಾಡಿದ್ದು, ಇದರಿಂದ ದಿಗ್ವಿಜಯ್ ಸಿಂಗ್ ಸಿಡಿಮಿಡಿಗೊಂಡರು.

Leave a Reply