ಮಂಡ್ಯ: ನಿಖಿಲ್ ಕುಮಾರಸ್ವಾಮಿ ಎದುರು ಭರ್ಜರಿ ಗೆಲುವು ದಾಖಲಿಸಿರುವ ಸುಮಲತಾ ತನ್ನ ಗೆಲುವಿನ ಬಗ್ಗೆ ಬೀಗದೆ ಪ್ರಬುದ್ಧ ಹೇಳಿಕೆ ನೀಡಿದ್ದಾರೆ. ನಾವೆಲ್ಲಾ ಒಂದೇ ಊರಿನವರಾಗಿದ್ದು, ರಾಜಕೀಯ ದ್ವೇಷ ಬಿಟ್ಟು ಒಂದೇ ಕುಟುಂಬದಂತೆ ಬಾಳೋಣವೆಂದು ಎಂದು ಕರೆ ನೀಡಿದರು.
ಚುನಾವಣೆ ಮುಗಿದಿದೆ. ಚುನಾವಣೆಯ ಸಂದರ್ಭದಲ್ಲಿ ಗೆಲುವಿನ ಪ್ರತಿಷ್ಠೆಗಾಗಿ ಪರಸ್ಪರ ವೈಷಮ್ಯ ಸಹಜವಾಗಿ ಉಂಟಾಗುತ್ತದೆ ಆದರೆ, ನಾವೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಮುಂದೆ ಸಾಗೋಣ. ಚುನಾವಣೆಯ ದ್ವೇಷ, ವೈಷಮ್ಯಗಳನ್ನು ಬಿಟ್ಟು ಒಂದೇ ಕುಟುಂಬದಂತೆ ಬದುಕೋಣ ಎಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ಎಂಬುವುದು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಅದು ಮುಗಿದ ನಂತರ ಎಲ್ಲರೂ ಒಗ್ಗಟ್ಟಾಗಿ ಊರಿನ ಸಮಸ್ಯೆ ಚರ್ಚಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸುಮಲತಾ ಹೇಳಿದ್ದಾರೆ.

Leave a Reply