ಛೋಟಾ ಉದೇಪುರ್​ (ಗುಜರಾತ್​): ಗುಜರಾತ್ ನ ಬುಡಕಟ್ಟು ಜನಾಂಗದ ಮದುವೆ ವಿಶಿಷ್ಟವಾಗಿದೆ. ಇಲ್ಲಿ ಮದುವೆಯಾಗುವ ಹುಡಗನ ಬದಲಿಗೆ ವಧುವನ್ನು ಆತನ ಅವಿವಾಹಿತ ಸಹೋದರಿ ಅಥವಾ ಆತನ ಅವಿವಾಹಿತ ಮಹಿಳಾ ಸಂಬಂಧಿ ಮದುವೆಯಾಗುವ ಸಂಪ್ರದಾಯ ಇದೆ. ಮದುವೆ ಗಂಡು ತನ್ನ ಮದುವೆಗೆ ಸ್ವಯಂ ಹಾಜರಾಗುವಂತಿಲ್ಲ, ಬದಲಾಗಿ ಎಲ್ಲ ರೀತಿಯಲ್ಲಿ ಶೃಂಗಾರ ಮಾಡಿಕೊಂಡು ಮದುವೆಯ ದಿನ ಮನೆಯಲ್ಲೇ ತಾಯಿ ಜೊತೆ ಇರಬೇಕು. ವರನ ವಿಹಾಹದ ಎಲ್ಲಾ ಸಂಪ್ರದಾಯವನ್ನು ವರನ ಸಹೋದರಿ ಮಾಡುತ್ತಾಳೆ. ಮೆರವಣಿಗೆಯಲ್ಲಿ ತೆರಳಿ, ವಧುವಿಗೆ ತಾಳಿ ಕಟ್ಟುವುದು, ಸಪ್ತಪದಿ ತುಳಿಯುವುದು ಹಾಗೂ ಇನ್ನಿತರ ಶಾಸ್ತ್ರಗಳನ್ನು ಅವಳೇ ನೆರವೇರಿಸುತ್ತಾಳೆ. ಎಂತಹ ಸೋಜಿಗ ಅಲ್ಲವೇ? ವಿವಾಹದ ಕಟ್ಟುಪಾಡು ಎಲ್ಲ ಮುಗಿದ ಮೇಲೆ ವಧುವನ್ನು ವರನ ಮನೆಗೆ ತಂದು ಒಪ್ಪಿಸುತ್ತಾರೆ. ಅವರು ಬಳಿಕ ಒಂದಾಗುತ್ತಾರೆ..

ಯಾಕೆ ಹೀಗೆ? ಇದು ತಮ್ಮ ಬುಡಕಟ್ಟು ಜನಾಂಗದಲ್ಲಿರುವ ವಿಶಿಷ್ಟ ಮದುವೆ. ಇದರ ಹಿಂದೆ ಅವರದ್ದೇ ಆದ ಕೆಲವು ಕಲ್ಪನೆಗಳು ಇವೆ. ಇಂತಹ ಮದುವೆ ಕೇವಲ ಸುರ್ಕೇಡಾ, ಸಾನಂದಾ ಮತ್ತು ಅಂಬಾಲ್​ ಗ್ರಾಮಗಳಲ್ಲಿ ಮಾತ್ರ ಇದೆ. ಒಂದು ವೇಳೆ ಹೀಗೆ ಮದುವೆ ಆಗದಿದ್ದರೆ ಅದು ಅಪಶಕುನ ಅಥವಾ ಅದರ ಕೆಟ್ಟ ಪರಿಣಾಮ ಅನುಭವಿಸಬೇಕಾದೀತು ಎಂಬ ಭಯ ಗ್ರಾಮಸ್ಥರಲ್ಲಿದೆ. ಹೀಗೆ ಸಂಪ್ರದಾಯ ಮುರಿದು ಮದುವೆಯಾದವರು ಅದರ ಕೆಟ್ಟ ಪರಿಣಾಮ ಅನುಭವಿಸಿದ್ದಾರೆ. ವಿಚ್ಛೇದನ, ಸದಾ ಜಗಳ, ಮದುವೆಯ ಸಂಬಂಧ ದೀರ್ಘ ಕಾಲ ಬಾಳಿಕೆ ಬರುವುದಿಲ್ಲ ಎಂಬ ಉದಾಹರಣೆಗಳನ್ನು ಗ್ರಾಮಸ್ಥರು ಕಂಡಿದ್ದಾರೆ ಎಂದು ಈ ಮದುವೆ ಸಂಪ್ರದಾಯ ಚಾಲ್ತಿಯಲ್ಲಿದೆ.

Leave a Reply