ತಮಿಳುನಾಡಿನಲ್ಲಿ 63 ವರ್ಷದ ಮಹಿಳೆ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಲಯಂನಿಂದ 63 ವರ್ಷ ವಯಸ್ಸಿನ ಮಹಿಳೆ ಕೃತಕ ಗರ್ಭಧಾರಣೆಯ (artificial fertility treatment) ಸಹಾಯದಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸೆಂತಾಮಿಲ್ ಸೆಲ್ವಿ 3.5 ಕಿ.ಜಿ. ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕೃಷ್ಣನ್ ಮತ್ತು ಸೆಂಥಿಮಿಲ್ ಸೆಲ್ವಿ ದಂಪತಿಗಳು ವಿವಾಹವಾಗಿ 42 ವರ್ಷಗಳ ಕಾಲ ಮಕ್ಕಳಾಗದೇ ಕೊರಗುತ್ತಿದ್ದರು ಇದೀಗ ಕೃತಕ ಗರ್ಭ ಧಾರಣೆಯ ಚಿಕೆತ್ಸೆಯ ಸಹಾಯದಿಂದ 71 ವರ್ಷ ವಯಸ್ಸಿನ ಕೃಷ್ಣನ್ ಮತ್ತು ಸೆಂಥಿಮಿಲ್ ಸೆಲ್ವಿ ತಮ್ಮ ಮಗುವಿಗೆ ಮಗುವನ್ನು ಕಂಡು ತುಂಬಾ ಉತ್ಸುಕರಾಗಿದ್ದಾರೆ.

ಇದು ತಮಿಳ್ನಾಡಿನ ಇತಿಹಾಸದಲ್ಲೇ ಇಷ್ಟೊಂದು ವಯಸ್ಸಿನ ಮಹಿಳೆ ಹೀಗೆ ಮಗುವಿಗೆ ಜನ್ಮ ನೀಡುತ್ತಿರುವುದು ಮತ್ತು ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Leave a Reply