ಸಾಯಬೇಕೋ -ಬದುಕಬೇಕೋ ಎಂದು ಇನ್ಸ್ಟಾ ಪೋಲ್ ನಲ್ಲಿ ಪ್ರಶ್ನಿಸಿದ  ದಾವಿಯ ಎಮಿಲಿಯ (16) 69% ಮಂದಿಯಿಂದ ಸಾಯಿ ಎಂದು ಉತ್ತರ ದೊರೆತ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಮಲೇಷ್ಯಾ ದಲ್ಲಿ 16 ವರ್ಷ ವಯಸ್ಸಿನ ಹುಡುಗಿಯೋರ್ವಳು ತಾನು ಸಾಯಲೋ ಅಥವಾ ಬದುಕಲೋ ಎಂಬ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ಪೋಲ್ ನಡೆಸಿದ್ದಳು.
ಅದರಲ್ಲಿ 69% ಜನರು ಸಾಯುವ ಆಯ್ಕೆಯನ್ನು ಆರಿಸಿದ್ದರಿಂದ ಹುಡುಗಿ ಆತ್ಮಹತ್ಯೆ ಮಾಡಿಕೊಂಡದ್ದಾಳೆ. ವರದಿಯ ಪ್ರಕಾರ ಆಕೆ ಅಂಗಡಿಯೊಂದರ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರ ಪ್ರಕಾರ ಆಕೆ ಖಿನ್ನತೆಯಿಂದ ಬಳಲುತ್ತಿದ್ದಳು ಹಾಗೂ ಫೇಸ್‌ಬುಕ್‌ ನಲ್ಲೂ ಜೀವನದಲ್ಲಿ ಸೋತ ಬಗ್ಗೆ ಬರೆದಿದ್ದಳು.

ಆಕೆ ಸಾಯಲು ಕಾರಣ ಆಕೆಗೆ ಸಾಯಲು ಪ್ರೇರೇಪಿಸಿ ಮತ ಚಲಾಯಿಸಿದವರು ಮತ್ತು ಅವರೇ ನಿಜವಾದ ಅಪರಾಧಿಗಳು ಎಂದು ವಕೀಲರೊಬ್ಬರು. ಆ ಪುಟ್ಟ ಹುಡುಗಿಗೆ ಮೆಜಾರಿಟಿ ನೆಟ್ಟಿಗರು ಆತ್ಮಹತ್ಯೆ ಮಾಡುವುದನ್ನು ನಿರುತ್ತೇಜಿಸಿ ಸರಿಯಾದ ಮಾರ್ಗದರ್ಶನ ನೀಡಿರುತ್ತಿದ್ದರೆ ಆಕೆ ಬದುಕಿರುತ್ತಿದ್ದಳು. ಅಭಿಪ್ರಾಯ ಪಟ್ಟಿದ್ದಾರೆ.

 

 

Leave a Reply