ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಕಲುಷಿತ ವಾತಾವರಣ. ಈ ವಾತಾವರಣದಲ್ಲಿ ದೇಹದ ಪ್ರತಿಯೊಂದು ಭಾಗವು ತೊಂದರೆ
ಗೊಳಗಾಗುತ್ತದೆ. ಅದರಲ್ಲೂ ಕೂದಲು ಹೆಚ್ಚು ಹಾನಿಗೊಳಗಾಗುತ್ತದೆ. ಕೂದಲನ್ನೇ ಪ್ರಮುಖವಾಗಿಟ್ಟುಕೊಂಡು ಕಂಪೆನಿಗಳು ಇದಕ್ಕಾಗಿ ಶಾಂಪೂ, ಕಂಡೀಶನರ್, ವಿವಿಧ ಎಣ್ಣೆಗಳನ್ನು ಉಪಯೋಗಿಸಲು ಜಾಹೀರಾತು ನೀಡುತ್ತವೆ. ಆದರೆ ಆರೋಗ್ಯಕರ ಹಾಗೂ ದಪ್ಪ ಕೂದಲನ್ನು ಹೊಂದಲು ಕಿತ್ತಳೆ ಹಾಗೂ ಲಿಂಬೆ ಹಣ್ಣಿನ ಜ್ಯೂಸ್ ಕೂಡಾ ಅತ್ಯಂತ ಪರಿಣಾಮಕಾರಿ ಕೆಲಸವನ್ನು ಮಾಡುತ್ತದೆ.
ಕೂದಲಿಗೆ ಅತ್ಯುತ್ತಮವಾದ ಆರೈಕೆಯನ್ನು ನೀಡುವಲ್ಲಿ ದಾಸವಾಳ ಪ್ರಮುಖ ಪಾತ್ರವಹಿಸುತ್ತದೆ. ದಾಸವಾಳದ ಎಣ್ಣೆಯ ಬಳಕೆಯಿಂದ ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ಮತ್ತು ನೀಳವಾಗಿರಲು ಸಹಾಯ ಮಾಡುತ್ತದೆ. ಕೂದಲಿಗೆ ಇದು ಆದ್ರತೆ ನೀಡುವ ಮೂಲಕ ಉತ್ತಮ ಪೋಷಣೆ ಹಾಗೂ ಕಾಂತಿ ದೊರಕುತ್ತದೆ.

ಬಾದಾಮಿ ಎಣ್ಣೆಯ ಬಳಕೆಯಿಂದ ಕೂದಲು ಶೀಘ್ರವಾಗಿ ಬೆಳೆಯುತ್ತದೆ. ಕೆಲವೊಮ್ಮೆ ಬಿಸಿಲು ಅತಿ ಹೆಚ್ಚಾದರೆ ಆದ್ರ್ರತೆಯ ಕೊರತೆ ಇದ್ದರೆ
ಕೂದಲು ಕೆಂಚಾಗುತ್ತದೆ. ಈ ತರಹದ ಕೆಂಚು ಕೂದಲಿಗೆ ದಾಸವಾಳದ ಎಣ್ಣೆ ಅತ್ಯುತ್ತಮ ಪರಿಹಾರ.
ವಯಸ್ಸಿಗೂ ಮುನ್ನವೇ ಕೂದಲು ನೆರೆಯುವ ಪರಿಯನ್ನು ದಾಸವಾಳದ ಎಣ್ಣೆ ನಿಧಾನವಾಗಿಸಿ ಕೂದಲು ಕಪ್ಪು ಬಣ್ಣವನ್ನು ಹೆಚ್ಚಿನ ಕಾಲದ ವರೆಗೆ ಉಳಿಸಿಕೊಳ್ಳುತ್ತದೆ.

Leave a Reply