ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ದೇಶ ಭಕ್ತಿಯನ್ನು ಪರೀಕ್ಷೆಗೆ ಒಡ್ಡಲಾಗುತ್ತಿದೆ‌. ಪರಸ್ಪರರ ಮೇಲೆ ನಂಬುಗೆ ಇರಲೇಬೇಕು. ನಮ್ಮ ನಡಿಗೆ ಸೌಹಾರ್ದ ಭಾರತ ಕಟ್ಟುವ ಕಡೆಗಿರಬೇಕು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಮುಸ್ಲಿಮರು ಬಲಿದಾನ ಮಾಡಿದ್ದಾರೆ. ಲಕ್ಷಾಂತರ ಮಂದಿ ದೇಶಕ್ಕಾಗಿ ಹೋರಾಡಿದ್ದಾರೆ. ಮುಸ್ಲಿಮರು ಈ ನೆಲವನ್ನು ಹಿಂದೆಯೂ ಪ್ರೀತಿಸುತ್ತಾರೆ, ಈಗಲೂ ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದು ಒಂದು ಸಾಕ್ಷಿ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಮುಸ್ಲಿಂ ಧರ್ಮಗುರುಗಳು ಅಥವಾ ಮೌಲ್ವಿಗಳು ದೇಶಪ್ರೇಮ ಹಾಡನ್ನು ಹಾಡುತ್ತಾ ಭಾರತದ ತ್ರಿವರ್ಣ ಧ್ವಜಾರೋಹಣ ಮಾಡುತ್ತಿದ್ದಾರೆ. ನಂತರ ಅವರು ಭಾರತದ ಭೂಪಟವನ್ನು ಬಿಡಿಸುತ್ತಾರೆ. ನಿಜವಾಗಿಯೂ ಕಣ್ತಣಿಸುವ ಈ ವಿಡಿಯೋವನ್ನು ನೀವೂ ಎಂಜಾಯ್ ಮಾಡಿ…

Leave a Reply