ರಾಯ್ಪುರ: ಛತ್ತೀಸ್ ಗಢದಲ್ಲಿ ಸೈನಿಕರ ಮಾನವೀಯತೆಗೆ ಪ್ರಶಂಸೆ ವ್ಯಕ್ತವಾಗಿದೆ. 231 ಬಟಾಲಿಯನ್ ಸಿಆರ್ಪಿಎಫ್ ಪಡೆಗಳು ಜೂನ್ 6 ರಂದು ಗಸ್ತು ತಿರುಗುತ್ತಿದ್ದಾಗ, ಗುಮೋದಿ ಗ್ರಾಮದಲ್ಲಿ 13 ವರ್ಷ ವಯಸ್ಸಿನ ಬಾಲಕ ಅನಾರೋಗ್ಯದಿಂದ ಬಳಲುತ್ತಿರುವುದನ್ನು ಕಂಡು ಕೊಂಡರು. ಸೈನಿಕರು ಆ ಹುಡುಗನನ್ನು ಸುಮಾರು 8 ಕಿ.ಮೀ. ದೂರದ ವರೆಗೆ ಎತ್ತಿಕೊಂಡು ಚಿಕಿತ್ಸೆ ಕೊಡಿಸಿದರು. ಹುಡುಗ ಕಾಮಾಲೆ ರೋಗದಿಂದ ಬಳಲುತ್ತಿರುವಂತೆ ಕಂಡುಬಂದಿದೆ. ಹುಡುಗನ ಸ್ಥಿತಿ ಈಗ ಚೆನ್ನಾಗಿದೆ ಎಂದು ತಿಳಿದು ಬಂದಿದೆ.
ಯೋಧರು ಮಂಚವನ್ನು ಹಗ್ಗದ ಸಹಾಯದಿಂದ ಉದ್ದದ ಕಟ್ಟಿಗೆ ಕಟ್ಟಿದ್ದಾರೆ. ಬಳಿಕ ಇಬ್ಬರು ಯೋಧರು ಅದನ್ನು ಹೆಗಲ ಮೇಲೆ ಇಟ್ಟುಕೊಂಡು ಬಾಲಕನನ್ನು ಕ್ಯಾಂಪ್‍ಗೆ ಸಾಗಿಸಿದ್ದಾರೆ.

Leave a Reply