ಉತ್ತರ ಪ್ರದೇಶದ ಬರೇಲಿಯಲ್ಲಿ ಹಳ್ಳಿಗರು ಮೊಸಳೆಯೊಂದನ್ನು ಮೆರವಣಿಗೆ ಮಾಡಿ ಅದರ ಜೊತೆ ಸೆಲ್ಫಿ ತೆಗೆದ ಘಟನೆ ವರದಿಯಾಗಿದೆ.
ಬರೇಲಿಗೆ ಕೊಲ್ಲಡಿ ನವಡಾ ಇಮಾಮಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು , ಹತ್ತಿರದ ನದಿಯಿಂದ ಅದನ್ನು ಹಿಡಿದ ಗ್ರಾಮಸ್ಥರು ಅದಕ್ಕೆ ಹಗ್ಗ ಕಟ್ಟಿ ಹಳ್ಳಿಯಲ್ಲಿ ಸಾರ್ವಜನಿಕವಾಗಿ ತಿರುಗಿ ಸೆಲ್ಫಿ ತೆಗೆದರು.
ಈ ಸೆಲ್ಫಿ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವುದರೊಂದಿಗೆ ಈ ವಿಷಯ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ಅವರು ಮೊಸಳೆಯನ್ನು ಗ್ರಾಮಸ್ಥರಿಂದ ಬಿಡುಗಡೆ ಮಾಡಿ ಪುನಃ ನದಿಯಲ್ಲಿ ಬಿಟ್ಟರು.

ಅರಣ್ಯ ಇಲಾಖೆ ತಂಡದ ಚಂದ್ರಶೇಖರ್ ಪೂಜಾರಿ, ಪ್ರಕಾಶ್ ,ಪುಷ್ಕರ್ ಜೋಶಿ ಗ್ರಾಮಕ್ಕೆ ತೆರಳಿ ಹಳ್ಳಿಗರಿಂದ ಮೊಸಳೆಯನ್ನು ಸ್ವತಂತ್ರ ಗೊಳಿಸಿದರು. ಮೊಸಳೆಗಳು ಆಕ್ರಮಣ ಕಾರಿ ಸರೀಸೃಪಗಳಾಗಿರುವುದರಿಂದ ಹೆಚ್ಚಾಗಿ ಅವುಗಳ ಬಗ್ಗೆ ಜಾಗ್ರತೆ ವಹಿಸಲಾಗುತ್ತದೆ.

 

Leave a Reply