ಗ್ರೇಟ್ ಪ್ಲೇಗ್

1720ರಲ್ಲಿ ಇಡೀ ವಿಶ್ವದಲ್ಲಿ ಪ್ಲೇಗ್ ರೋಗ ಹರಡಿತ್ತು. ಇದನ್ನು ‘ಗ್ರೇಟ್ ಪ್ಲೇಗ್ ಆಫ್ ಮಾರ್ಸಿಲ್ಲೆ ‘ ಎಂದು ಕರೆಯಲಾಗಿತ್ತು. ಮಾರ್ಸಿಲ್ಲೆಫ್ರಾನ್ಸ್‌ನ ಒಂದು ನಗರ, ಆ ಸಮಯದಲ್ಲಿ ವಿಶ್ವದಲ್ಲಿ ಜನಸಂಖ್ಯೆ ವಿರಳವಾಗಿತ್ತು. ಮಾರ್ಸಿಲ್ಲೆಯಲ್ಲಿ ಬಂದ ಪ್ಲೇಗ್‌ನಿಂದಾಗಿ ಒಂದು ಲಕ್ಷದಷ್ಟು ಜನರು ತೀರಿಕೊಂಡಿದ್ದರು. ಪ್ಲೇಗ್ ಹರಡಿದ ಕೆಲವೇ ತಿಂಗಳುಗಳಲ್ಲಿ 50 ಸಾವಿರದಷ್ಟು ಜನರು ಬಲಿಯಾದರು. ನಂತರದ 2 ವರ್ಷಗಳ ಅಂತರದಲ್ಲಿ ಇನ್ನೂ 50 ಸಾವಿರದಷ್ಟು ಜನರು ಈ ಪ್ಲೇಗ್‌ಗೆ ಬಲಿಯಾಗಿದ್ದರು. ಆ ಸಮಯದಲ್ಲಿ ಹೆಣಗಳ ರಾಶಿಯೇ ಬಿದ್ದಿದ್ದವು. 1807ರಲ್ಲಿ ಈ ರೋಗವು ಚೈನಾಕ್ಕೆ ಹಬ್ಬಿತ್ತು. ಚೈನಾದಿಂದ ಭಾರತಕ್ಕೆ 1890ರಲ್ಲಿ ಈ ರೋಗವು ವ್ಯಾಪಿಸಿತ್ತು. ಚೈನಾಕ್ಕಿಂತ ಭಾರತದಲ್ಲಿ ಈ ಮಹಾಮಾರಿಯು ತೀವ್ರವಾಗಿ ವ್ಯಾಪಿಸಿತ್ತು. ಹಲವಾರು ಜನರು ಇದಕ್ಕೆ ಬಲಿಯಾಗಿದ್ದರು.

ಕಾಲರಾ

1820ರಲ್ಲಿ ಕಾಲರಾ ಎಂಬ ಪಿಡುಗು ವಿಶ್ವದೆಲ್ಲೆಡೆ ವ್ಯಾಪಿಸಿತ್ತು. ಈ ರೋಗವು ಏಷ್ಯಾದ ದೇಶಗಳಲ್ಲಿ ತನ್ನ ದಾಳಿಯನ್ನು ನಡೆಸಿತ್ತು. ಈ ಸಾಂಕ್ರಾಮಿಕ ರೋಗವು ಭಾರತ, ಜಪಾನ್, ಕೊಲ್ಲಿ ರಾಷ್ಟಗಳು, ಬ್ಯಾಂಕಾಕ್, ಜಾವಾ, ಭೂತಾನ್, ಚೈನಾ, ಮಾರಿಷಸ್, ಸಿರಿಯಾ ಮೊದಲಾದ ದೇಶಗಳನ್ನು ತನ್ನ ದಾಳಿಗೆ ಬಲಿಯಾಗಿಸಿತ್ತು.

ಕಾಲರಾದಿಂದಾಗಿ ಜಾವಾದಲ್ಲಿ 1 ಲಕ್ಷ ಜನರು ತೀರಿಕೊಂಡರು. ಥೈಲ್ಯಾಂಡ್ ಫಿಲಿಪೀನ್ಸ್ ಹಾಗೂ ಇಂಡೋನೇಷಿಯಾದಲ್ಲಿ ಅತೀ ಹೆಚ್ಚು ಜನರು ತೀರಿಕೊಂಡಿದ್ದರು. ಈ ಮಹಾಮಾರಿಯು ಬಹಳಷ್ಟು ಜನರ ಬದುಕನ್ನು ಛಿದ್ರಗೊಳಿಸಿತ್ತು.

ಕಾಲರಾದ ಬಳಿಕ ಸರಿಸುಮಾರು 100 ವರ್ಷಗಳ ಬಳಿಕವೂ ಸ್ಪೂ ಎಂಬ ರೋಗವು ವಿಶ್ವದಲ್ಲಿ ಕಾಣಿಸಿಕೊಂಡಿತ್ತು. ಸ್ಪಾನಿಶ್ ಫ್ಲೂ ಎಂಬ ಹೆಸರಿನಿಂದ 1918 ರಲ್ಲಿ ಪ್ರಾರಂಭಗೊಂಡ ಸ್ಪಾನಿಶ್ ರೋಗವು 1920 ರಲ್ಲಿ ತನ್ನ ತೀವ್ರತೆಯನ್ನೂ ಹೆಚ್ಚಿಸಿತ್ತು. ಪ್ರಥಮ ವಿಶ್ವಯುದ್ಧ ಪ್ರಾರಂಭಗೊಂಡಂತೆ ಸ್ಪಾನಿಶ್ ಫ್ಲೂ ರೋಗವು ತನ್ನ ರೂಪವನ್ನು ತೋರಿಸಿತ್ತು. ಪ್ರಥಮ ವಿಶ್ವ ಯುದ್ಧದಲ್ಲಿ ಮರಣ ಹೊಂದಿದವರಿಗಿಂತ ದ್ವಿಗುಣ ಜನರು ಸ್ಪಾನಿಶ್ ನ್ಯೂ ನಿಂದಾಗಿ ಮರಣ ಹೊಂದಿದ್ದಾಗಿ ವರದಿಗಳು ಕಾಣಸಿಗುತ್ತವೆ. ಈ ಸಾಂಕ್ರಾಮಿಕವು ಭಾರತದಲ್ಲಿ 2 ಕೋಟಿಗಳಷ್ಟು ಜೀವ ಹಾನಿಯನ್ನುಂಟು ಮಾಡಿತ್ತು. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬ್ ಸೇರಿಸಿ 8 ಲಕ್ಷದಷ್ಟು ಜನರು ತೀರಿಕೊಂಡಿದ್ದರು.

ಕೊರೋನ

2020 ರಲ್ಲಿ ಮತ್ತೊಂದು ಆಘಾತ ವಿಶ್ವವನ್ನು ಕಂಗೆಡಿಸುತ್ತಿದೆ. ಚೈನಾದ ವುಹಾನ್ ನಗರದಿಂದ ಹೊರಟ ಸಾಂಕ್ರಾಮಿಕ ರೋಗ ‘ಕೊರೋನ’ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಕೋವಿಡ್-19 ಎಂಬ ಹೆಸರಿನಿಂದ ಕರೆಯಲ್ಪಡುವ ಈ ಮಹಾಮಾರಿಯಿಂದಾಗಿ ಲಕ್ಷ ಲಕ್ಷ ಜನರು ಬಲಿಯಾಗಿದ್ದಾರೆ. ಬಲಿಯಾಗುತ್ತಲೇ ಇದ್ದಾರೆ. ವಿಜ್ಞಾನಿಗಳು ಇದಕ್ಕೆ ವ್ಯಾಕ್ಸಿನ್ ತಯಾರಿಸುವುದರಲ್ಲಿ ನಿರತರಾಗಿದ್ದಾರೆ. ಆದರೆ ಇನ್ನೂ ಸಫಲರಾಗಿಲ್ಲ. ಇಡೀ ವಿಶ್ವವೇ ತಮ್ಮ ಮನೆಗಳಲ್ಲಿ ಬಂಧಿಯಾಗಿದೆ. ಮನೆಯಿಂದ ಹೊರ ಬರುವುದೇ ಅಸಾಧ್ಯವಾಗಿದೆ. .

Leave a Reply