ಮಲಪ್ಪುರಮ್: ಹತ್ತು ಕೋಟಿ ಮೌಲ್ಯದ ನಿಷೇಧಿಸಲ್ಪಟ್ಟ ಟರ್ಕಿಯ ನೋಟುಗಳೊಂದಿಗೆ ಐವರು ಮಲಪ್ಪುರಮ್ ನ ನಿಲಂಬೂರ್ ನಲ್ಲಿ ಬಂಧಿಂತರಾಗಿದ್ದಾರೆ. ಎಡಪಾಲ್ ನಿವಾಸಿ ಅಬ್ದುಲ್ ಸಲಾಮ್ ಸಹಚರರಾದ ಜಂಶಿರ್, ಸಲೀಮ್ ಸಂತೋಶ್ ಕುಮಾರ್ ಶ್ರೀಜಿತ್ ಬಂಧಿತರು.

ಕಾಸರಗೋಡಿನಿಂದ ಇಪ್ಪತ್ತೈದು ಲಕ್ಷ ರೂಪಾಯಿ ನೀಡಿ ಅಬ್ದುಲ್ ಸಲಾಮ್ ಟರ್ಕಿ ಕರೆನ್ಸಿ ಖರೀದಿಸಿದ್ದ. ಇದನ್ನು ಹೆಚ್ಚಿನ ಬೆಲೆಗೆ ಮಾರುವುದು ಇವರ ಉದ್ದೇಶವಾಗಿತ್ತು. ಆದರೆ ಇದು ನಿಷೇಧಿಸಲ್ಪಟ್ಟ ನೋಟುಗಳಾಗಿವೆಯೆಂದು ತಪಾಸಣೆಗೊಳಪಡಿಸಿದಾಗ ತಿಳಿದು ಬಂತು ಎಂದು ಪೋಲೀಸರು ತಿಳಿಸಿದ್ದಾರೆ.

Leave a Reply