ಜೈಪುರ: ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮ್ ಪುರುಷರನ್ನು ಕ್ರಿಮಿನಲ್ ಅಪರಾಧಿಗಳನ್ನಾಗಿ ತೋರಿಸುವ ಉದ್ದೇಶದಿಂದ ತ್ರಿವಳಿ ತಲಾಕ್ ಮಸೂದೆಯನ್ನು ಸಿದ್ದಪಡಿಸಿದೆಯೆಂದು ಅಖಿಲ ಬಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಮಹಿಳಾ ವಿಭಾಗದ ಅಧ್ಯಕ್ಷೆ ಡಾ! ಅಸ್ಮಾ ಝೊಹರಾ ಹೇಳಿದ್ದಾರೆ.

ಮುಸ್ಲಿಮ್ ಪತಿಯಂದಿರನ್ನು ಅಪರಾಧಿಗಳನ್ನಾಗಿಸಿ ಮೂರು ವರ್ಷ ಜೈಲಿಗೆ ಹಾಕಿ ಅವರ ಪತ್ನಿ ಮಕ್ಕಳನ್ನು ಬೀದಿಗೆ ತಳ್ಳುವ ವ್ಯವಸ್ಥಿತ ಯೋಜನೆಯಿದು ಎಂದವರು ಹೇಳಿದ್ದಾರೆ.

ತ್ರವಳಿ ತಲಾಕ್ ಮಸೂದೆ ಜಾರಿಗೆ ತರುವ ಮೋದಿ ಸರಕಾರದ ವಿರುದ್ದ ಬುಧವಾರ ಸಂಘಟಿಸಲಾಗುವ ಮಹಾರ್ಯಾಲಿಯ ವಿವರಣಾ ಸಭೆಯ ಪತ್ರಕಾಗೋಷ್ಟಿಯಲ್ಲಿ ವರು ಮಾತನಾಡುತ್ತಿದ್ದರು.

Leave a Reply