ಆನೆಯೊಂದು ಗುವಾಹಟಿ ರಸ್ತೆಗೆ ನುಗ್ಗಿ ಭೀತಿ ಹುಟ್ಟಿಸಿದೆ. ಆಂಚಂಗ್ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿದ ಈ ಕಾಡಾನೆ ಗುವಾಹಾಟಿಯಲ್ಲಿ ಜಿಎಸ್ ರಸ್ತೆ ಯಲ್ಲಿ ಸಂಚರಿಸಿದ್ದು ವಾಹನ ಸಂಚಾರ ಸ್ಥಗಿತ ಗೊಂಡಿದೆ. ಈ ರಸ್ತೆ ಶಾಪಿಂಗ್ ಮಳಿಗೆಗಳು ಮತ್ತು ದೊಡ್ಡ ಮಳಿಗೆಗಳು ತುಂಬಿರುವ ಜನನಿಭಿಡ ಪ್ರದೇಶದಲ್ಲಿ ಜನರು ಭಯ ಪಟ್ಟಿದ್ದಾರೆ. ಜನರು ಗುಂಪು ಸೇರಿ ವಿಡಿಯೋ ಚಿತ್ರೀಕರಿಸುವಾಗ ಅದು ಇನ್ನಷ್ಟು ರೋಷಗೊಳ್ಳುತ್ತದೋ ಎಂದು ಕೆಲವು ಜನರು ಭಾವಿಸಿದ್ದರು. ಆಂಚಂಗ್ ವನ್ಯಜೀವಿ ಅಭಯಾರನ್ಯದಿಂದ ಸುಮಾರು ೨೫ ಕಿಲೋಮೀಟರ್ ದೂರ ಅದು ನಡೆದು ಬಂದಿದೆ ಎಂದು ವರದಿಯಾಗಿದೆ. ಕೊನೆಗೂ ಅರಣ್ಯ ಅಧಿಕಾರಿಗಳು ಆನೆಯನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ. ಆಂಚಂಗ್ ವನ್ಯಜೀವಿ ಅಭಯಾರಣ್ಯದಿಂದ ಈ ಕಾಡಾನೆ ತಪ್ಪಿಸಿಕೊಂಡು ಆಹಾರದ ಹುಡುಕಾಟದಲ್ಲಿ ನಾಡಿಗೆ ನುಗ್ಗಿದೆ.