ಈಗಿನ ಕಾಲದಲ್ಲಿ ದೇಹ ಸೌಂದರ್ಯಕ್ಕಾಗಿ ಏನೆಲ್ಲಾ ಮಾಡುತ್ತಾರೆ. ಜನರು ವ್ಯಾಯಾಮ ಮಾಡುತ್ತಾರೆ. ಜಿಮ್ ಸೇರುತ್ತಾರೆ. ಆದರೆ ಈಗೀಗ ಹೊಸ ಮಾಡರ್ನ್ ಜಿಮ್ ಗಳಿಗೆ ಸಾಮಾನ್ಯರಿಗೆ ಹೋಗಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಎಸಿ ರೂಮು ಮತ್ತು ಆಧುನಿಕ ತಂತ್ರಜ್ಞಾನದ ಜೊತೆ ಅಷ್ಟೇ ದುಬಾರಿ ಫೀಸು ಕೂಡ ಪಡೆಯುತ್ತಾರೆ. ಆದ್ದರಿಂದ ಜಿಮ್ ಹೋಗಲು ಹಣ ಸಾಕಾಗುವುದಿಲ್ಲ ಎಂದು ಅಮೇರಿಕಾದ ಮೇರಿಲ್ಯಾಂಡ್ನ ಡೆಜೆ ಎಂಬಾಕೆ ಮನೆಯಲ್ಲಿ ವಿಡಿಯೋ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಟ್ರೇಡ್ ಮಿಲ್ ಖರೀದಿಸಲು ಸಾಧ್ಯವಾಗದ ಆಕೆ ಅಡುಗೆ ಕೋಣೆಯಲ್ಲಿ ಟ್ರೇಡ್ ಮಿಲ್ಗೆ ಸಾಬೂನು ನೀರಿನ ಮೂಲಕ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾಳೆ. ಆ ವಿಡಿಯೋ ಸುಮಾರು 21 ಮಿಲಿಯನ್ ವೀಕ್ಷಣೆ ಕಂಡಿದ್ದು, ಜನರು ಆಕೆಯ ಫಿಟ್ನೆಸ್ ತಂತ್ರವನ್ನು ಮೆಚ್ಚಿದ್ದಾರೆ.

https://twitter.com/_dlew32/status/1122946709628313601

Leave a Reply