Representational Image

ಕೋರಿಯಕೋಡ್: ಶ್ರೀಲಂಕಾದಲ್ಲಿ ಚರ್ಚ್ ಬಾಂಬ್ ಸೋಟದ ಕಾರಣಕ್ಕೆ ಬುರ್ಖಾ ಮತ್ತು ಮುಖ ಮುಚ್ಚುವ ಎಲ್ಲ ರೀತಿಯ ಬಟ್ಟೆಗೆ ನಿಷೇಧ ವಿಧಿಸಿರುವ ಬೆನ್ನಲ್ಲೇ, ಕೇರಳದ ಮುಸ್ಲಿಂ ವಿದ್ಯಾಸಂಸ್ಥೆಯೊಂದು ತನ್ನ ವ್ಯಾಪ್ತಿಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮುಖಮುಚ್ಚುವ ಬಟ್ಟೆ ನಿಷೇಧಿಸಿದೆ.
ಕೇರಳದ ಮುಸ್ಲಿಂ ಎಜ್ಯುಕೇಷನಲ್ ಸೊಸೈಟಿ, ಹೆಣ್ಣುಮಕ್ಕಳು ಮುಖಮುಚ್ಚಿ ಶಾಲಾ-ಕಾಲೇಜಿಗೆ ಪ್ರವೇಶಿಸುವಂತಿಲ್ಲ. 2019-20 ನೇ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ ಎಂದು ಎಂಜಿಎಸ್ ಸಂಸ್ಥೆಯ ಅಧ್ಯಕ್ಷ ಡಾ. ಫಝಲ್ ಗಪೂರ್ ತಿಳಿಸಿದ್ದಾರೆ.

ಎಂಇಎಸ್ ವ್ಯಾಪ್ತಿಯಲ್ಲಿ ಶಾಲಾಕಾಲೇಜು ಸಹಿತ 150 ಶಿಕ್ಷಣ ಸಂಸ್ಥೆಗಳಿವೆ. ಈ ಎಲ್ಲ ಶಾಲೆ-ಕಾಲೇಜುಗಳಿಗೆ ನೋಟಿಸ್ ಕಳುಹಿಸಿ, ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ. ಮುಸ್ಲಿಂ ಸಮುದಾಯದ ಒಳಿತಿಗಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ. ವಸ್ತ್ರಸಂಹಿತೆ ಪಾಲನೆ ಕಡ್ಡಾಯವಾಗಿದೆ ಎಂದು ಸೂಚಿಸಲಾಗಿದೆ

Leave a Reply