Image : NewsClick

ಕೊಲ್ಕತ್ತಾ: ದೇಶದಲ್ಲಿ ಮತ್ತೊಮ್ಮೆ ಗುಂಪು ಹತ್ಯೆ ನಡೆದಿದೆ. ದನ ಮತ್ತು ದನದ ಮಾಂಸದ ವಿಷಯದಲ್ಲಿ ಈ ಹಿಂದೆ ನಡೆದ ಗುಂಪು ಹತ್ಯೆ ದೇಶದಲ್ಲಿ ತುಂಬಾ ಸದ್ದು ಮಾಡಿತ್ತು. ಇದೀಗ ಬಿಹಾರದ ಅರಾರಿಯಲ್ಲಿ 44 ವಷದ ಮಹೇಶ್ ಯಾದವ್ ಎನ್ನುವ ವ್ಯಕ್ತಿಯನ್ನು ‘ದನಕಳ್ಳ’ ಎಂದು ಆರೋಪಿಸಿ ಜನರ ಗುಂಪು ಥಳಿಸಿ ಕೊಲೆ ಮಾಡಿದೆ. ಗಂಭೀರ ಗಾಯಗೊಂಡಿದ್ದ ಮಹೇಶ್ ಯಾದವ್ ಗುರುವಾರ ಮೃತಪಟ್ಟಿದ್ದಾರೆ.

ಅರಾರಿಯ ದಕ್ ಹರಿಪೂರ್ ಗ್ರಾಮದ ರಾಬರ್ಟ್‌ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹೇಶ್ ಯಾದವ್ ಮತ್ತು ಇಬ್ಬರು ಸಹಾಯಕರು ಸೇರಿ ದನ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎಂದು ಊರವರು ಆರೋಪಿಸಿದ್ದಾರೆ. ಈತ ಈ ಹಿಂದೆಯೂ ದನ ಕಳ್ಳತನ ಮಾಡಿದ್ದು ಈತನ ವಿರುದ್ಧ ದನ ಕಳ್ಳತನದ ಹಲವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.

Leave a Reply